ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangaluru) : ಏಪ್ರಿಲ್ ಒಂದು ಆರ್ಥಿಕ ವರ್ಷದ ಮೊದಲ ದಿನದಿಂದಲೇ ರಾಜ್ಯದ ಜನತೆಗೆ ಬೆಲೆ ಏರಿಕೆ(Price Hike) ಬಿಸಿ ತಟ್ಟಲಿದೆ.
ದಿನದಿಂದ ದಿನಕ್ಕೆ ಹೆಚ್ಚುಗುತ್ತಿರುವ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇಂದಿನಿಂದ ದುಬಾರಿ ದುನಿಯಾ ಆರಂಭವಾಗಲಿದ್ದು ಹಾಲು(Milk), ಮೊಸರು(Curd), ವಿದ್ಯುತ್ ಬಿಲ್(Electricity Bill) ಏರಿಕೆಯಿಂದ ತತ್ತರಿಸಿದ್ದ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಬೆಂಗಳೂರಿನಲ್ಲಿ ಏಪ್ರಿಲ್ 1ರಿಂದ ಪ್ರತಿ ಮನೆ, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಕಟ್ಟಡಗಳ ಬಳಿ ಕಸ ಸಂಗ್ರಹಕ್ಕಾಗಿ ತೆರಿಗೆ (Tax) ವಸೂಲಿ ಮಾಡಲು ಬಿಬಿಎಂಪಿ(BBMP) ಮುಂದಾಗಿದೆ. ಮಂಗಳವಾರದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಬಿಬಿಎಂಪಿ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕಸಕ್ಕೆ ತೆರಿಗೆ ವಿಧಿಸುವ ಕ್ರಮಕ್ಕೆ ಮುಂದಾಗಿದ್ದು ಈ ಮೂಲಕ 600 ಕೋಟಿ ರೂ ಆದಾಯ ಸಂಗ್ರಹಿಸುವ ಪ್ಲ್ಯಾನ್ ಮಾಡಿದೆ.
ಅಂಗಡಿ ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂ. ತೆರಿಗೆ ವಸೂಲಿಗೆ ಪಾಲಿಕೆ ನಿರ್ಧರಿಸಿದೆ. ಕಟ್ಟಡದ ವಿಸ್ತೀರ್ಣ ಆಧಾರದ ಮೇಲೆ ಕಸ ತೆರಿಗೆ ಶುಲ್ಕ ಹೆಚ್ಚಳವಾಗಲಿದೆ. ಇನ್ಮುಂದೆ ಆಸ್ತಿ ತೆರಿಗೆ ಜೊತೆಗೆ ಕಸ ತೆರಿಗೆಯೂ ಅನ್ವಯವಾಗಲಿದೆ.600 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 10 ರೂ. ತೆರಿಗೆ600-1000 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 50 ರೂ ತೆರಿಗೆ1000-2000 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 100 ರೂ ತೆರಿಗೆ2000-3000 ಚದರ ಅಡಿ ಕಟ್ಟಡಗಳಿಗೆ 150 ರೂ3000-4000 ಚದರ ಅಡಿ ಕಟ್ಟಡಗಳಿಗೆ 200 ರೂ4000 ಚದರ ಅಡಿ ಮೇಲ್ಪಟ್ಟ ಕಟ್ಟಡಗಳಿಗೆ 400 ರೂ ತೆರಿಗೆ ವಿಧಿಸಲಾಗುತ್ತಿದೆ.
ಇಂದಿನಿಂದ ಕೆಎಂಎಫ್ ನಂದಿನಿ(KMF Nandini) ಹಾಲಿನ ದರ ಹೆಚ್ಚಳವಾಗಲಿದ್ದು, ಲೀಟರ್ ಹಾಲಿನ ದರ 4 ರೂ ಏರಿಕೆಯಾಗುತ್ತಿದೆ. ಇದರೊಂದಿಗೆ ಹೋಟೆಲ್ ಗಳಲ್ಲಿ ಟೀ, ಕಾಫಿ ದರವೂ ಹೆಚ್ಚಾಗುವ ಸಾಧ್ಯತೆಯಿದೆ.
ಮುದ್ರಾಂಕ ಶುಲ್ಕವು 50 ರೂ. ನಿಂದ 500 ರೂ.ಗಳವರೆಗೆ ಹೆಚ್ಚಳವಾಗಲಿದೆ. ಅಫಿಡೆವಿಟ್ ಶುಲ್ಕ 20 ರೂ.ನಿಂದ 100 ರೂ.ರವರೆಗೆ ಏರಿಕೆಯಾಗಲಿದೆ. ಇದೇ ವೇಳೆ ನೀರಿನ ದರವೂ 1 ಪೈಸೆ ಏರಿಕೆಯಾಗಿದ್ದು, ಜಾರಿಯಾಗುವ ಸಾಧ್ಯತೆಯಿದೆ.
ಹೊಸ ವಾಹನ ಗ್ರಾಹಕರಿಗೆ ಶಾಕ್ ನೀಡಿದ್ದು, ಉಕ್ಕು ಬಿಡಿ ಭಾಗ ದುಬಾರಿ ಇದರ ಜೊತೆಗೆ ಬಿಡಿ ಭಾಗ ಉಕ್ಕುಗಳ ಆಮದು ದರ ನಾಳೆಯಿಂದಲೇ ಏರಿಕೆಯಾಗುತ್ತದೆ. ಇದರಿಂದಾಗಿ ವಾಹನಗಳ ಬೆಲೆಯೂ ಗಗನಕ್ಕೇರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಇದನ್ನು ಓದಿ : ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ನಿವೃತ್ತಿ ?
ಕಾರ್ಮಿಕನ ಕಾಲಿಗೆ ಕಚ್ಚಿ ಗಾಯಗೊಳಿಸಿದ ಕೋತಿ. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು