ಅಂಕೋಲಾ : ತಾಲೂಕಿನ ಶಿರೂರು ಭೂ ಕುಸಿತ ಘಟನೆಗೆ ಸಂಬಂಧಿಸಿ ಒಂದೊಂದು ಮಾತು ಹೊರ ಬರುತ್ತಿದೆ. ಘಟನೆಯಲ್ಲಿ ಸಿಲುಕಿದವರು ಕೇವಲ 11 ಮಂದಿಯಲ್ಲಿ ಇನ್ನೂ ಹಲವರು ಇದ್ದಾರೆ ಎನ್ನಲಾಗುತಿತ್ತು.
ಇದೀಗ ಸ್ವಾಮೀಜಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಜುಲೈ 16 ರಂದು ಸಂಭವಿಸಿದ ಘಟನೆಯಲ್ಲಿ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ್ ನಾಯ್ಕ ಮತ್ತು ಕೇರಳ ಮೂಲದ ಅರ್ಜುನ್ ಪತ್ತೆಯಾಗಬೇಕಾಗಿದೆ.
ಘಟನೆ ನಡೆದ ಕೆಲ ಹೊತ್ತಿನಲ್ಲಿಯೇ ಜಿಲ್ಲಾಡಳಿತ ನಾಪತ್ತೆಯಾದವರ ಶೋಧ ನಡೆಸಿತ್ತು. ರಾಷ್ಟ್ರೀಯ ಹೆದ್ದಾರಿ, ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಆದರೆ ಯಾವ ಪ್ರಯೋಜನ ಆಗಿಲ್ಲ.
ನದಿಯಲ್ಲಿ ಸಾಕಷ್ಟು ಪ್ರಮಾಣದ ಕಲ್ಲು ಮಣ್ಣು, ಮರಗಳು ಸೇರಿದ್ದರಿಂದ ಕಾರ್ಯಾಚರಣೆಗೆ ಅಡಚಣೆಯಾಯಿತು. ಹೀಗಾಗಿ ಜಿಲ್ಲಾಡಳಿತ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.
ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಉಡುಪಿಯ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿಯೊಬ್ಬರು, ತಾವು ತಂದಿದ್ದ ಪೆಂಡೋಲಮ್ ಮತ್ತು ಎಲೆಕ್ಟ್ರಾನಿಕ್ ಸ್ಕ್ಯಾನರ್ ಬಳಸಿ ಪತ್ತೆ ಕಾರ್ಯ ಮಾಡಿದರು.
.
ಅವರೇ ಹೇಳುವ ಹಾಗೇ ಈ ಭೂ ಕುಸಿತದಲ್ಲಿ ಸಾವನ್ನಪ್ಪಿದವರು 11 ಜನರಲ್ಲ. ಒಟ್ಟು ಸುಮಾರು 16 ಜನರು ಸಿಲುಕಿದ್ದಾರೆ ಎನ್ನುತ್ತಾರೆ. ಕೇರಳದ ಅರ್ಜುನ್ ಇದ್ದ ಟ್ರಕ್ ಸಿಗಲಿದೆ. ಆದರೇ ಟ್ರಕ್ ನಿಂದ ಶವ ಹೊರ ಹೋಗಿದೆ. ಜಗನ್ನಾಥ್ ನಾಯ್ಕ ಮೃತದೇಹ 15 ಅಡಿ ಆಳದಲ್ಲಿ ಮಣ್ಣಿನಡಿ ಸಿಲುಕಿದೆ. ಲೋಕೇಶ್ ಅವರಿಗಾಗಿ ತುಂಬಾ ಕಷ್ಟಪಡಬೇಕು ಎಂದಿದ್ದಾರೆ.
ಕೇವಲ ಒಂದು ವಾಹನವಲ್ಲ ಇನ್ನೂ ಎರಡು ವಾಹನಗಳಿವೆ ಎಂದು ಗುರೂಜಿ ಹೇಳಿದ್ದಾರೆ. ತಾನು ತೋರಿಸಿದ ಸ್ಥಳದಲ್ಲಿ ಶೋಧ ನಡೆಸಬೇಕು ಎಂದು ಅವರು ಹೇಳಿದ್ದಾರೆ.