ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕುಂದಾಪುರ(Kundapur): ನದಿಗೆ ಹಾರಿದ ನಾಟಕವಾಡಿದ ಎರಡು ಮಕ್ಕಳ ತಾಯಿಯೊಬ್ನಳು ಯುವಕನೊಂದಿಗೆ ಪರಾರಿಯಾದ ಘಟನೆ ನಡೆದಿದೆ.
ವಿಠಲವಾಡಿ ಮೂಲದ ಹೀನಾ ಕೌಷರ್(33) ಎಂಬಾಕೆಯೆ ನಾಪತ್ತೆಯ ನಾಟಕವಾಡಿದವಳು. ಕುಂದಾಪುರ(Kundapur) ಚರ್ಚ್ ರೋಡ್‌ನಿಂದ ಕೋಡಿಗೆ ಹೋಗುವ ಸೇತುವೆ ಬಳಿ ಹೀನಾ ಕೌಷರ್ ಸ್ಕೂಟಿ ಹಾಗೂ ಚಪ್ಪಲಿ ಬಿಟ್ಟು ನದಿಗೆ ಹಾರಿದ ರೀತಿಯಲ್ಲಿ ಕಂಡುಬಂದಿತ್ತು. ಹೆಮ್ಮಾಡಿಯ(Hemmadi) ಹೊಟೇಲ್ ಕಾರ್ಮಿಕ ಸಾಹಿಲ್ (27) ಎಂಬುವನ ಜೊತೆ ಪರಾರಿಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಮಹಿಳೆಯ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದಳು. ಕುಂದಾಪುರ ಫುಡ್ ಮಾರ್ಕ್ ಎಂಬ ಹೋಟೇಲ್ ನಲ್ಲಿ ಯುವಕ ಕೆಲಸ ಮಾಡಿಕೊಂಡಿದ್ದ. ಜೂನ್ 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಕುಂದಾಪುರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಸ್ಕೂಟಿಯಲ್ಲಿ ಹೋದವ ಇದುವರೆಗೆ ಬಾರದೆ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ. ಇಬ್ಬರು ಜೊತೆಗೆ ಓಡಿ ಹೋಗಿರುವ ಬಗ್ಗೆ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ : ಆಕೆ ಅಂಥಿಂಥವಳಲ್ಲ. ಹದಿನಾಲ್ಕನೆ ಮದುವೆಗೆ ಸಿದ್ದಳಾದ ಚಾಲಾಕಿ ಪೊಲೀಸರ ಬಲೆಗೆ.
ಚಾಕು ನುಂಗಿದ ನಾಗರ. ಅಪಾಯದಿಂದ ಪಾರು ಮಾಡಿದ ಸ್ನೇಕ್ ಪವನ್.
/