ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ(Police Raid) ನಡೆಸಿದ ಘಟನೆ ತಾಲೂಕಿನ ಬೆಳ್ಕೆ ಗ್ರಾಮದಲ್ಲಿ ನಡೆದಿದೆ.

ಕಲ್ಬಂಡಿ ಭೂಮಿಕಾ ಫ್ರೆಂಡ್ಸ್ ರೀಕ್ರಿಯೆಶನ್ ಕ್ಲಬ್ ನಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಆಡಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮೀಣ ಪೊಲೀಸ್ ಠಾಣೆಯ(Rural Police Station) ಸಿಪಿಐ ಮಂಜುನಾಥ್ ರೆಡ್ಡಿ ಅವರು ದಾಳಿ ನಡೆಸಿದ್ದರು.  ಆರೋಪಿ ಕ್ಲಬ್ ಮಾಲೀಕ ಮಾದೇವ ನಾಯ್ಕ ಸಹಿತ 25 ಆರೊಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಗಣಪತಿ ಈರಪ್ಪ ನಾಯ್ಕ, ಕುಕನೀರ್ ಹೆಬ್ಳೆ,  ಪರಮೇಶ್ವರ ದುರ್ಗಪ್ಪ ನಾಯಕ್‌ ಶಿರಾಲಿ ಸಾರದಹೊಳೆ,  ದಿನೇಶ್ ಮಂಜುನಾಥ್ ನಾಯ್ಕ ಬೆಳಕೆ, ನಾಗರಾಜ್ ಮಂಜಯ್ಯ ಬಂಡಾರಿ ಬೆಳಕೆ, ವೆಂಕಟೇಶ್ ನಾರಾಯಣ ನಾಯಕ್ ಮುರ್ಡೇಶ್ವರ, ನಾಗಪ್ಪ ಗೋವಿಂದ ನಾಯ್ಕ ಕಲ್ಬಂಡಿ, ಗೋವಿಂದ ಗಣಪತಿ ಮೋಗೇರ ಅಳ್ವೆಕೊಡಿ, ಭರ್ಮಯ್ಯ ಮಾಸ್ತಪ್ಪ ನಾಯ್ಕ ಮುಂಡಳ್ಳಿ, ಶನಿಯಾರ ನಾರಾಯಣ ನಾಯ್ಕ ಗೋಳಿಬೀಳೂರು, ಶ್ರೀಧರ್ ತಿಮ್ಮಪ್ಪ ಮೊಗೇ‌ರ್, ಬಾಲಚಂದ್ರ ಕಾರ್ವಿ, ವಸಂತ್ ಚಳ್ಳ ಮೊಗೇರ್, ಶಿವರಾಜ್ ವೆಂಕಟ್ರಮಣ ನಾಯ್ಕ ಮುಂಡಳ್ಳಿ, ನಾಗರಾಜ್ ಲಚ್ಮಯ್ಯ ನಾಯ್ಕ ಮುಂಡಳ್ಳಿ, ಪಾಂಡು ಮಂಜು ಮೊಗೇರ್ ಹೆರ್ತಾರ್, ಶ್ರೀಧರ್ ಜಟ್ಟ ನಾಯ್ಕ ಮುರ್ಡೇಶ್ವರ, ಹರೀಶ್ ದಯಾನಂದ ಮೊಗೇರ್ ಮುಂಡಳ್ಳಿ,  ನಾಗೇಶ ದುರ್ಗಪ್ಪ ನಾಯ್ಕ, ಮುಂಡಳ್ಳಿ ನೀರ್ಗದ್ದೆ, ಪ್ರಶಾಂತ್ ಶೇಖರ್ ಶೇಟ್ ಬೈಂದೂರು, ನಾರಾಯಣ ಕುಪ್ಪಯ್ಯ ನಾಯ್ಕ ಆಸರಕೇರಿ ಭಟ್ಕಳ,  ಯೋಗೇಶ್ ವೆಂಕಟರಮಣ ಮೊಗೇರ್ ಮಾವಿನಕುರ್ವೆ ಭಟ್ಕಳ, ಆನಂದ್ ಮಾದೇವ ನಾಯ್ಕ ಬೆಳ್ನಿ, ಭಾಸ್ಕರ ಬೈರಪ್ಪ ನಾಯ್ಕ ಶಿರಾಲಿ, ರವಿ ವೆಂಕಟರಮಣ ನಾಯ್ಕ ಮುಟ್ಟಳ್ಳಿ ಇವರ ಮೇಲೆ ಪ್ರಕರಣ ದಾಖಲಾಗಿದೆ.

ದಾಳಿ ಸಂದರ್ಭದಲ್ಲಿ 2000 ನಗದು, ಆಟದ ಕಾರ್ಡುಗಳು, ಟೋಕನ್, ಕ್ಲಬ್ ಮೆಂಬರ್ಸ್ ಲೇಟರ್, ಬಿಳಿ ಬಣ್ಣದ ಹುಂಡೈ ವೆರ್ನ ಕಾರು, ನೀಲಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಬಜಾಜ್ ಆಟೋರಿಕ್ಷಾ, ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್, ಹೀಗೆ ವಿವಿಧ ತರದ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಇದನ್ನು ಓದಿ : ಗೋವಾಕ್ಕೆ ತೆರಳುತ್ತಿದ್ದ ಬೈಕ್  ಸವಾರ ಸ್ಥಳದಲ್ಲೆ ಸಾವು.

ಟೈಲ್ಸ್ ಅಂಗಡಿ ಮಾಲಿಕನ ಮೇಲೆ ಗ್ರಾನೈಟ್ ಬಿದ್ದು ದುರ್ಮರಣ