ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ನೌಕಾನೆಲೆ ಕಾಂಪೌಂಡ್ ಆವಾಂತರದಿಂದಾಗಿ ಜನರಿಗೆ ತೊಂದರೆಯಾಗುತ್ತಿದ್ದು ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ(R V Desjapande) ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕಾರವಾರದ ಜಿಲ್ಲಾ ಪಂಚಾಯತ(Karwar Zilla Panchayat) ಸಭಾಭವನದಲ್ಲಿ ಜರುಗಿದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ (KDP Meeting) ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ  ಬಾರೀ ಮಳೆ ಬಿದ್ದರೇ ಹಲವು ಗ್ರಾಮಗಳಲ್ಲಿ ಮಳೆ ನೀರು ತುಂಬಿ ಜನರಿಗೆ ತೊಂದರೆಯಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಮನೆಗಳಿಗೆ ನೀರು ತುಂಬುತ್ತಿವೆ. ಇ ಬಗ್ಗೆ ನೌಕಾನೆಲೆ ಅಧಿಕಾರಿಗಳ ಗಮನಕ್ಕೆ ತಂದು ನೀರು ಸರಿದು ಹೋಗಲು ಅವಕಾಶ ಮಾಡಲು ಕ್ರಮ ಕೈಗೊಳ್ಳಿ ಎಂದರು ಮಾಡುತ್ತಿಲ್ಲ. ಹೀಗಾಗಿ ಜನತೆ ತೊಂದರೆ ಅನುಭವಿಸುತ್ತಿದ್ದಾರೆ.

ಈ ಬಗ್ಹೆ ಸಭೆಯಲ್ಲಿ ಶಾಸಕ ಸತೀಶ ಸೈಲ್(Satish Sail) ವಿಷಯ ಪ್ರಸ್ತಾಪಿಸಿದಾಗ ಆರ್ ವಿ ದೇಶಪಾಂಡೆ ಗರಂ ಆದರು. ನೌಕಾನೆಲೆ ಅವರಪ್ಪನ ಆಸ್ತಿನಾ. ಜನರ ತ್ಯಾಗದ ಫಲವಾಗಿ ನೌಕಾನೆಲೆ ಆಗಿದೆ. ಹೀಗಾಗಿ ಜನರಿಗೆ ತೊಂದರೆ ಆಗದಂತೆ ಗಮನ ಹರಿಸಿ. ಎಸ್ಪಿಯವರು ನೌಕಾನೆಲೆ ಅಧಿಕಾರಿಗಳೊಂದಿಗೆ ಕೋ ಆರ್ಡಿನೇಶನ್ ಮಾಡಬೇಕು  ಎಂದು ಸಭೆಯಲ್ಲಿ ತಿಳಿಸಿದರು.

ಇದನ್ನು ಓದಿ : ಮಹಿಳೆ ಸ್ನಾನದ ವೇಳೆ ಇಣುಕಿದ ಭೂಪ ಪೊಲೀಸ್ ವಶಕ್ಕೆ.