ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ನಗರದಲ್ಲಿ ಮೀನು ಮಾರುಕಟ್ಟೆಯಲ್ಲಿ (Fish Market) ಮೀನು ವ್ಯಾಪಾರ ಮಾಡುವ ಮಹಿಳೆಯರು ಮಾಘ ಚೌತಿಯನ್ನ(Magha Chouti) ಅದ್ದೂರಿಯಿಂದ ಆಚರಿಸಿದರು.
ಕಳೆದ ನಾಲ್ಕೈದು ದಿನಗಳಿಂದ ಮಾರುಕಟ್ಟೆ ಬಂದ್ ಮಾಡಿದ ಮಹಿಳೆಯರು(Womens) ಸಂಪೂರ್ಣವಾಗಿ ಶುಚಿಗೊಳಿಸಿ ಶನಿವಾರದಂದು ಮಂಟಪದಲ್ಲಿ ಬೃಹತ್ ಗಣೇಶ ಮೂರ್ತಿ(Ganesh idol) ಪ್ರತಿಷ್ಟಾಪಿಸಿದರು. ಮಾಘ ಚೌತಿಯ ದಿನ ಗಣೇಶ ಹುಟ್ಟಿದ ದಿನ ಎಂದೇ ಹೇಳಲಾಗುತ್ತದೆ. ಹೀಗಾಗಿ ಈ ದಿನದಂದು ಕಾರವಾರದಲ್ಲಿ ಗಣೇಶ ಚತುರ್ಥಿ(Karwar Ganesh Chaturthi) ಮಾದರಿಯಲ್ಲಿಯೇ ಗಣಪತಿ ಮೂರ್ತಿಯನ್ನಿಟ್ಟು ಪೂಜಿಸುವುದು ಸಂಪ್ರದಾಯ.
ಈ ಭಾಗದ ನಾಗರಿಕರು ಏನಾದ್ರೂ ಹರಕೆ ಮಾಡಿಕೊಂಡಲ್ಲಿ ಈಡೇರಿದಲ್ಲಿ ಮಾಘ ಚೌತಿಯ ದಿನದಂದು ಗಣಪತಿಯನ್ನ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಅಲ್ಲದೇ ಗಣೇಶ ಚತುರ್ಥಿಯ ಸಮಯದಲ್ಲಿ ನಾನಾ ಕಾರಣಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗದೇ ಇರೋರು ಮಾಘ ಚೌತಿಯಂದು ಗಣಪನ ಮೂರ್ತಿಯನ್ನಿಟ್ಟು ಪೂಜೆ ಮಾಡ್ತಾರೆ. ಹೀಗಾಗಿ ಮೀನುಗಾರ ಮಹಿಳೆಯರು(Fish) ತಮ್ಮ ಹರಕೆ, ಪ್ರಾರ್ಥನೆ ಈಡೇರಿದ ಕಾರಣಕ್ಕಾಗಿ ಬೃಹತ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಹಿಂದೆ ಕಾರವಾರ(Karwar) ನಗರದ ಹೃದಯ ಭಾಗದಲ್ಲಿ ಮೀನು ಮಾರುಕಟ್ಟೆ(Fish Market) ಇತ್ತು. ನಗರಸಭೆ(CMC) ಹಳೆಯ ಕಟ್ಟಡ ತೆರವುಗೊಳಿಸಿದಾಗ ಮಹಿಳೆಯರು ಅತಂತ್ರರಾಗಿದ್ದರು. ಹಳೆಯ ಜಾಗದಲ್ಲಿಯೆ ತಮಗೆ ಮೀನು ಮಾರುಕಟ್ಟೆ ಆಗಬೇಕೆಂದು ಗಣೇಶನನ್ನ ಪ್ರಾರ್ಥನೆ ಸಲ್ಲಿಸಿದರಂತೆ. ಹೀಗಾಗಿ ಹಳೆಯ ಸ್ಥಳದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಆಗಿದೆ. ಅಂದಿನಿಂದ ಇವರೆಗೆ ಪ್ರತಿವರ್ಷವೂ ಶ್ರಾವಣ ಮಾಸದಲ್ಲಿ ಸತ್ಯನಾರಾಯಣ ವೃತ(Satyanarayan Vruta) ಆಚರಿಸುತ್ತ ಬಂದಿದ್ದಾರೆ. ಈ ಬಾರೀ ಮಾಘ ಚೌತಿಯ(Magha Chouti) ದಿನದಂದು ಅದ್ದೂರಿಯಾಗಿ ಗಣೇಶನ ಹಬ್ಬ ಆಚರಿಸಿದರು.
ಅಲ್ಲದೇ ದೇವರ ಮುಂದೆ ಮಹಿಳೆಯರು ಭಜನೆ(Bhajanas), ಪುಗಡಿ ಕುಣಿತ(Pugadi Dance) ಮಾಡಿ ಸಂಭೃಮಿಸಿದ್ರು. ಎಲ್ಲಾ ಮಹಿಳೆಯರು ಗುಲಾಬಿ ಬಣ್ಣದ ಸೀರೆ(Pink Colour Saree) ತೊಟ್ಟು ಗಮನ ಸೆಳೆದರು. ಚೌತಿಯ ಅಂಗವಾಗಿ ಸಾರ್ವಜನಿಕವಾಗಿ ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ಡಿಜೆ ಸಂಗೀತದೊಂದಿಗೆ ಭರ್ಜರಿ ಸ್ಟೆಪ್ ಹಾಕುತ್ತ ನಗರದಲ್ಲಿ ಗಣೇಶನ ಮೆರವಣಿಗೆ(Ganesh Procession) ನಡೆಸಿ ಕೊನೆಯಲ್ಲಿ ಅರಬ್ಬೀ ಸಮುದ್ರದಲ್ಲಿ ಮೂರ್ತಿ ಜಲಸ್ಥಂಬನಗೊಳಿಸಿದರು.
ಇದನ್ನು ಓದಿ : ಕೇಂದ್ರ ಸರ್ಕಾರದ ಬಜೆಟ್ ಮಂಡನೆ.ಮಹಿಳೆಯರಿಗೆ ಗಿಫ್ಟ್, ಸೇನಾ ಬಲ ಹೆಚ್ಚಳಕ್ಕೆ ಒತ್ತು.