ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಉತ್ತರಕನ್ನಡ ಜಿಲ್ಲೆಯಲ್ಲಿ(Uttarkannada) ನಿನ್ನೆಯಿಂದ ಅಧಿಕ ಪ್ರಮಾಣದ ಮಳೆಯಾಗುತ್ತಿದೆ. ಪರಿಣಾಮವಾಗಿ ಕಾರವಾರ ತಾಲೂಕಿನ ಕದ್ರಾ(Kadra) ಸಮೀಪದ ಬಾಳೆಮನೆ ಸಮೀಪ ಗುಡ್ಡ ಕುಸಿತ (Landslide) ಉಂಟಾಗಿದೆ.
ಕದ್ರಾದಿಂದ ಕೊಡ್ಸಳ್ಳಿ (Kadra to Kodsalli) ಅಣೆಕಟ್ಟೆಗೆ(Dam) ಸಾಗುವ ಮಾರ್ಗದಲ್ಲಿ ಬೆಳಗಿನ ಜಾವ ಸುಮಾರಿಗೆ ಗುಡ್ಡ ಕುಸಿದಿದ್ದರಿಂದ ಸಂಪರ್ಕ ಕಡಿತವಾಗಿದೆ. ಕೊಡ್ಸಳ್ಳಿ ಅಣೆಕಟ್ಟೆಯಿಂದ(Kodsalli Dam) ಸುಮಾರು 20ಕಿ.ಮೀ ಮತ್ತು ಕದ್ರಾ ಅಣೆಕಟ್ಟೆಯಿಂದ ಸುಮಾರು 10ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.
ಘಟನೆಯಿಂದ ಬಾಳೆಮನೆ ಹಾಗೂ ಸೂಳಗೇರಿ ಭಾಗದ ನಾಗರಿಕರಲ್ಲಿ ಆತಂಕ ಹೆಚ್ಚಾಗಿದೆ. ಕೆಲ ವರ್ಷಗಳ ಹಿಂದೆ ಕೊಡ್ಸಳ್ಳಿ ಬಳಿ ಗುಡ್ಡ ಕುಸಿತ ಉಂಟಾಗಿತ್ತು. ಭೂ ವಿಜ್ಞಾನಿಗಳು ಈ ಭಾಗದಲ್ಲಿ ಅಧ್ಯಯನ ನಡೆಸಿ ಮತ್ತೆ ಗುಡ್ಡ ಕುಸಿತ ಆಗುವ ಬಗ್ಗೆ ತಿಳಿಸಿದ್ದರು.
ಇದೀಗ ಮತ್ತೆ ಈ ಭಾಗದಲ್ಲಿ ಗುಡ್ಡ ಕುಸಿದಿದ್ದರಿಂದ ಎಚ್ಚರಿಕೆಯ ಗಂಟೆಯಾಗಿದೆ. ಸದ್ಯ ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದು ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನು ಓದಿ : ಮಳೆಯ ಹಿನ್ನಲೆಯಲ್ಲಿ ಜುಲೈ ಮೂರರಂದು ಶಾಲೆಗೆ ರಜೆ ಘೋಷಣೆ.