ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಜೋಯಿಡಾದ ರಾಮನಗರದಿಂದ ಗೋವಾ(Ramanagar to Goa) ರಾಷ್ಟ್ರೀಯ ಹೆದ್ದಾರಿ NH-4A ನ ಅನಮೋಡದಲ್ಲಿ ರಸ್ತೆ ಕುಸಿತ ಉಂಟಾಗಿದ ಹಿನ್ನೆಲೆಯಲ್ಲಿ ಮಾರ್ಗದಲ್ಲಿ ಬಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಶನಿವಾರ ರಾತ್ರಿ ಅನಮೋಡ(Anmod) ಬಳಿ ರಸ್ತೆ ಕುಸಿತವಾಗಿದ್ದು, ಈ ಪ್ರದೇಶದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಗೋವಾ ದಕ್ಷಿಣ(South Goa) ಕಲೆಕ್ಟರ್ ಅವರು ಸದ್ರಿ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ4A ಕರ್ನಾಟಕದ ರಾಮನಗರ ಅನಮೋಡ ಮುಖಾಂತರ ಸಂಚರಿಸುವ ವಾಹನ ಸಂಚಾರ ನಿಷೇಧಿಸಲು ಕೋರಿದ್ದಾರೆ.
ಹೀಗಾಗಿ ಉತ್ತರಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರೀಯಾ(DC K Laxmipriya) ಮಾರ್ಗದಲ್ಲಿ ಸಂಚಾರ ನಿಷೇಧಿಸಿ ಆದೇಶಿಸಿದ್ದಾರೆ. ಜೋಯಿಡಾದ ರಾಮನಗರದಿಂದ ಗೋವಾ ಕಡೆ ಸಂಚರಿಸುವ ದಿನನಿತ್ಯದ ಅಗತ್ಯ ಸೇವೆಗಳಡಿ ಬರುವ ತರಕಾರಿ ಲಘು ವಾಹನ, ಹಾಲಿನ ವಾಹನ ಹಾಗೂ ಇನ್ನಿತರ ಲಘು ವಾಹನಗಳ ಸಾರ್ವಜನಿಕ ಬಸ್ ಸಂಚಾರ ಹೊರತುಪಡಿಸಿ ಅಧಿಕ ಭಾರದ ವಾಹನ/ಟ್ರಕ್ ಗಳ(Heavy Vehicle) ಸಂಚಾರವನ್ನು ದಿನಾಂಕ 05-07-2025 ರಿಂದ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ಇದನ್ನು ಓದಿ : ವ್ಯವಹಾರಕ್ಕಾಗಿ ಹಣ ಪಡೆದು ವಂಚಿಸುತ್ತಿದ್ದ ಭಟ್ಕಳದ ವ್ಯಕ್ತಿ ಬಂಧನ.