ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಪಟ್ಟಣವನ್ನು ಸ್ಫೋಟಗೊಳಿಸುವುದಾಗಿ ಇ-ಮೇಲ್ ಮೂಲಕ ಸಂದೇಶ ರವಾನಿಸಿ  ಬೆದರಿಕೆ ಹಾಕಿದ ಪ್ರಕರಣಕ್ಕೆ  ಸಂಬಂಧಿಸಿ ಪೊಲೀಸರು  ಆರೋಪಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ (40) ಎಂಬಾತನನ್ನು ಭಟ್ಕಳ ಪೊಲೀಸರು(Bhatkal Police) ವಶಕ್ಕೆ ಪಡೆದಿದ್ದಾರೆ. ಈತ ಮೇಲೆ ಈಗಾಗಲೇ 16 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಅಪರಾಧಿಯಾಗಿ ಗುರುತಿಸಿಕೊಂಡಿದ್ದಾನೆ.

ದೆಹಲಿ, ಕೇರಳ, ಪುದುಚೇರಿ,  ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ, ಉತ್ತರಾಖಂಡ್ ಮತ್ತು ಕರ್ನಾಟಕದಲ್ಲಿ ಪ್ರಕರಣಗಳು ದಾಖಲಾಗಿವೆ.  ಇ- ಮೇಲ್ ಕಳಿಸಲು ಬಳಸಿದ ಮೊಬೈಲ್  ಆಧಾರದ ಮೇಲೆ ಪ್ರಕರಣ ಪತ್ತೆ ಹಚ್ಚಲಾಗಿದೆ.

ಜುಲೈ 10ರಂದು ಬೆಳಿಗ್ಗೆ 7.23 ಕ್ಕೆ  [email protected] ನಿಂದ ಭಟ್ಕಳ ಶಹರ ಪೊಲೀಸ್ ಠಾಣೆಗೆ “We will plant bomb in Bhatkal town. The bomb will blast within 24 hours” ಬಂದಿದೆ. ತಕ್ಷಣವೇ ಪೊಲೀಸರು ಎಚ್ಚರಗೊಂಡು ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿದ್ದರು.

ತಮಿಳುನಾಡಿನಲ್ಲಿ ಕಣ್ಣನ್ ಗುರುಸಾಮಿಯನ್ನು ಬಂಧಿಸಿದ ಭಟ್ಕಳ ಪೊಲೀಸರು ವಿಚಾರಣೆ ನಡೆಸಿದಾಗ, ನಿಜವಾದ ಆರೋಪಿಯಾಗಿರುವ ನಿತಿನ್ ಶರ್ಮಾ ಮಾಹಿತಿ ಬಹಿರಂಗವಾಗಿದೆ.

ಜುಲೈ 10ರಂದು ನಿತಿನ್ ಶರ್ಮಾ ಕೇರಳದ ಮುನ್ನಾರ್ ಠಾಣೆಯಲ್ಲಿ ಬಂಧಿತನಾಗಿದ್ದ. ಅಲ್ಲಿಯೇ ಬಂಧಿತನಾಗಿದ್ದ ಕಣ್ಣನ್ ಗುರುಸಾಮಿಯಿಂದ ಮೊಬೈಲ್ ಪಡೆದು ಭಟ್ಕಳ ಪೊಲೀಸರಿಗೆ ಈ ಸಂದೇಶ ಕಳಿಸಿದ್ದನೆಂದು ತಿಳಿದುಬಂದಿದೆ.

2016-17ರಲ್ಲಿ   ದೆಹಲಿಯ ತಿಹಾರ್ ಜೈಲಿನಲ್ಲಿ(Tihar Jail) ಒಂದು ವರ್ಷ ಶಿಕ್ಷೆ ಅನುಭವಿಸಿದ್ದ ಈತ, ಹಿಂದಿನ ಹೆಸರು ನಿತಿನ್‌ಶರ್ಮಾ ಎಂದು, ನಂತರ ಖಾಲಿದ್ ಎಂದು ಹೆಸರು ಬದಾಲಿಯಿಸಿಕೊಂಡಿದ್ದಾನೆ.

ಧರ್ಮಾಂತರವಾದ ವಿಚಾರದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಇನ್‌ಸ್ಪೆಕ್ಟರ್ ದಿವಾಕರ್ ಪಿ ಎಂ, ಪಿಎಸೈ ನವೀನ್ ನಾಯ್ಕ, ಸೋಮರಾಜ ರಾಠೋಡ ನೇತೃತ್ವದಲ್ಲಿ ನಡೆಯಿತು. BNS 351(4) ಅಡಿಯಲ್ಲಿ ಬಾಡಿ ವಾರಂಟ್ ಪಡೆದು ಆರೋಪಿಯನ್ನು ವಶಕ್ಕೆ ತೆಗೆದು ಕೊಂಡು ತನಿಖೆ ಮುಂದುವರಿಸಲಾಗಿದೆ.
ಇದನ್ನು ಓದಿ : ಕ್ರಿಯಾಶೀಲ ಎಸ್ಪಿ ಎಂ ನಾರಾಯಣ ವರ್ಗ. ಹೊಸ ಎಸ್ಪಿಯಾಗಿ ದೀಪನ್ ನೇಮಕ.

ನಡು ರಸ್ತೆಯಲ್ಲಿ  ಕತ್ತಿ ಝಳಪಿಸಿ  ಧಮಕಿ. ವಿಡಿಯೋ ವೈರಲ್