ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ನಿರ್ಮಾಣ ಹಂತದ ಮನೆಗೆ ಕ್ಯೂರಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಶಾಕ್(Current Shock) ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಹಳಿಯಾಳ ರಸ್ತೆಯ(Haliyal Road) ಅಲೈಡ್ ಏರಿಯಾದಲ್ಲಿ ಸಂಭವಿಸಿದೆ.
ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಜಾರ್ಖಂಡ್(Jarkhand) ಮೂಲದ ಅಲಿ ಅನ್ಸಾರಿ (40) ಎಂಬಾತ ಸಾವನ್ನಪ್ಪಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ಟೈಲ್ಸ್ ಫಿಟ್ಟಿಂಗ್ ಗುತ್ತಿಗೆದಾರರಾಗಿರುವ ಅಲಿ ಅನ್ಸಾರಿ ಅಲೈಡ್ ಪ್ರದೇಶದಲ್ಲಿ ನೂತನವಾಗಿ ಮನೆ ನಿರ್ಮಿಸುತ್ತಿದ್ದರು. ಮನೆಗೆ ಕ್ಯೂರಿಂಗ್ ಮಾಡುವ ಸಲುವಾಗಿ ನೀರು ಹಾಕುತ್ತಿರುವಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ದಾಂಡೇಲಿ ನಗರ ಠಾಣೆಯ(Dandeli Town Station) ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸರಳ ಸಜ್ಜನಿಕೆಯ ಹಾಗೂ ಸರ್ವಧರ್ಮ ಸಮನ್ವಯತೆಯ ಪ್ರತಿಪಾದಕರಾಗಿದ್ದ ಅಲಿ ಅನ್ಸಾರಿ ಅವರ ಅಕಾಲಿಕ ನಿಧನಕ್ಕೆ ನಗರದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ : ಗರಿಗೆದರಿದ ಕರಾವಳಿ ಉತ್ಸವ. ಸಚಿವರಿಂದ 5 ಕೋಟಿ ರೂ. ಘೋಷಣೆ
ಬನವಾಸಿಯಲ್ಲಿ ಅದ್ದೂರಿ ಕದಂಬೋತ್ಸವ. ಪಂಪ ಪ್ರಶಸ್ತಿ ಪ್ರದಾನ.