ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ತಾಲೂಕಿನ ಕರ್ಕಿ ಗ್ರಾಮದ ರಾಮೇಶ್ವರ ಕಂಬಿಯ ಹಿರಿಯ ನಾಗರಿಕರೊಬ್ಬರು  ಕಾಲ್ನಡಿಗೆಯ ಮೂಲಕ ತಿರುಪತಿ ಯಾತ್ರೆ(Tirupati Yatre) ಕೈಗೊಂಡಿದ್ದಾರೆ.

ನಿವೃತ್ತ ಕೃಷಿ ಸಹಾಯಕ ಅಧಿಕಾರಿಯಾಗಿರುವ ಗಣಪತಿ ಮಾಸ್ತಿ ನಾಯ್ಕ ಅವರು ತಮ್ಮ  76 ವರ್ಷದ ಇಳಿ ವಯಸ್ಸಿನಲ್ಲೂ  ದೇವರನ್ನು ಕಾಣಲು ಹಂಬಲಿಸಿ ತಮ್ಮ ಕಾಲ್ನಡಿಗೆಯ ಮೂಲಕ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ತೆರಳುತ್ತಿದ್ದಾರೆ.

ಶ್ರಾವಣ ಮಾಸದ (Shravana Month) ಆರಂಭಗೊಂಡ  ಜುಲೈ 25ರಂದು   ತಮ್ಮ ಮೂಲ ಮನೆ ಕುಮಟಾ ತಾಲೂಕಿನ(Kumta Taluku) ಮಾಸೂರಿನಿಂದ ತಾವು ಮಾಡಿಕೊಂಡ ಹರಕೆಯಂತೆ ಗಣಪತಿ ನಾಯ್ಕ ಅವರು ದೃಢ ನಿರ್ಧಾರ ಮಾಡಿದ್ದಾರೆ.

ಮೂಲತಃ ಮಾಸೂರಿನವರಾದ(Native Masuru) ಗಣಪತಿ ನಾಯ್ಕ ಅವರು ಪ್ರಸ್ತುತ ಕರ್ಕಿ ಗ್ರಾಮದಲ್ಲಿ(Karki Village) ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ. ಮಾಸೂರಿನ ನಿವೃತ್ತ ದಿ. ವೆಂಕಟ್ರಮಣ ಮಾಸ್ತಿ ನಾಯ್ಕ ಅವರ ಕಿರಿಯ ಸಹೋದರರಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು,  ಮದುವೆ ಆಗಿದೆ.
ಗಣಪತಿ ಅವರು ತಿಮ್ಮಪ್ಪನ್ನು ನಡಿಗೆಯ ಮೂಲಕವೇ  ಕಾಣುತ್ತಿರುವುದು   ಇದು ಎರಡನೇ ಬಾರಿ. ಈ ಹಿಂದೆ ಇವರು ಪಾದಯಾತ್ರೆ ಮೂಲಕ ತಿಮ್ಮಪ್ಪ ದೇವರ ದರ್ಶನ ಪಡೆದ್ದಿದ್ದರು. ಅಷ್ಟೇ ಅಲ್ಲದೆ, ನಾಲ್ಕು ಬಾರಿ ಅವರು ತಮ್ಮ ಜೀವನದಲ್ಲಿ ಧರ್ಮಸ್ಥಳಕ್ಕೆ (Dharmasthala) ಪಾದಯಾತ್ರೆಯ ಮೂಲಕ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡಿದ್ದರು.

ಸುಮಾರು 800 ಕಿ. ಮೀಟರ್ ದೂರದಲ್ಲಿ, ಬಹುಎತ್ತರದಲ್ಲಿ ಕುಳಿತಿರುವ ಏಳು ಬೆಟ್ಟದೊಡೆಯ ತಿಮ್ಮಪ್ಪ ಸ್ವಾಮಿಯ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಯಾತ್ರೆ ಕೈಗೊಂಡಿರುವ ಜಿ. ಎಂ. ನಾಯ್ಕ ಅವರ ಈ ಯಾತ್ರೆಗೆ ಅಭಿಮನ್ಯು ಮನೆಯ ಕುಟುಂಬದವರು ಹಾಗೂ ಅವರ ಹುಟ್ಟೂರಿನ ಮತ್ತು ವಾಸ್ತವ ಇರುವ ಊರಿನ ಬಂಧು-ಬಳಗದವರಲ್ಲದೇ, ಸಾರ್ವಜನಿಕರು ಶುಭ ಕೋರಿದ್ದಾರೆ.

ಇದನ್ನು ಓದಿ : ಕಾರವಾರದಲ್ಲಿ ನಾಗರಪಂಚಮಿ ಸಂಭೃಮ. ಮಕ್ಕಳ ಕೈಲಿ ಹಾವು ನೀಡಿ ಅರಿವು.