ಕಾರವಾರ(Karwar) : ಸದಾಶಿವಗಡದ ಅಮೃತ ವಿದ್ಯಾಲಯ ಕ್ರಿಕೆಟ್ ಅಕಾಡೆಮಿ(Amrut Vidyalaya Cricket Academi) ಕಾರವಾರ ಇವರ ಸಯುಕ್ತ ಆಶ್ರಯದಲ್ಲಿ ನಡೆದ 20 ಓವರ್ ನ ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್(State Level Leather Ball Cricket) ಪಂದ್ಯಾವಳಿಯಲ್ಲಿ ಕಾರವಾರದ ಅಮೃತ್ ವಿದ್ಯಾಲಯ(Amrut Vidyalaya Karwar) ಮತ್ತು ನ್ಯೂ ಹೈ ಸ್ಕೂಲ್ ಬಾಡ(New Highschool Baad) ತಂಡಗಳು ಫೈನಲ್ ಗೆ ಲಗ್ಗೆ ಇಟ್ಟಿವೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಾರವಾರದ ನ್ಯೂ ಹೈಸ್ಕೂಲ್ ಬಾಡ ತಂಡವು ಉಡುಪಿಯ ಸಿಲಾಸ್ ಇಂಟರ್ನ್ಯಾಶನಲ್(Udupi Silas International) ತಂಡವನ್ನು ಪರಾಜಿತಗೊಳಿಸುವ ಮೂಲಕ ಫೈನಲ್(Final) ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಧೀರಜ್ ಸಾಗೇಕರ್, ಸಂತೋಷ್ ರಾಯ್ಕರ್, ಹಾಗೂ ಟೀಮ್ ಮ್ಯಾನೇಜರ್ ಸುಧಾಕರ್ ಗುನಗಿ ಮತ್ತು ಹಳೆ ವಿದ್ಯಾರ್ಥಿ ತಂಡ, ಶಿಕ್ಷಕರು, ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಅತಿಥೇಯ ಅಮೃತ್ ವಿದ್ಯಾಲಯ(Amrut Vidyalaya) ಮತ್ತು ನ್ಯೂ ಹೈಸ್ಕೂಲ್ ಬಾಡ ತಂಡಗಳ ನಡುವೆ ರೋಚಕವಾದ ಫೈನಲ್ ಪಂದ್ಯ ನಡೆಯಲಿದ್ದು ಕ್ರಿಕೆಟ್ ಅಭಿಮಾನಿಗಳು, ಕಾರವಾರ(Karwar) ನಾಗರಿಕರು ಆಗಮಿಸಿ ಉಭಯ ತಂಡಗಳ ಆಟಗಾರರನ್ನ ಪ್ರೋತ್ಸಾಹಿಸುವಂತೆ ಕಾರವಾರದ ಅಮೃತ್ ವಿದ್ಯಾಲಯ ಆಡಳಿತ ಮಂಡಳಿ ತಿಳಿಸಿದೆ.
ಇದನ್ನು ಓದಿ : ಹೊನ್ನಾವರದಲ್ಲಿ ಖಾಸಗಿ ಬಸ್ ಪಲ್ಟಿ. ಹಲವರಿಗೆ ಗಾಯ.
ಭಟ್ಕಳದಲ್ಲಿ ರಕ್ತಸ್ರಾವದಿಂದ ಸರ್ವೆಯರ್ ಸಾವು.