ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) :  ಮೀನು ಹಿಡಿಯಲು ಹೋದ ಸಹೋದರರಿಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ  ತಾಲೂಕಿನ ಮಾದನಸರ ಗ್ರಾಮದ ಕವಲಗಿ ಹಳ್ಳದಲ್ಲಿ ಸಂಭವಿಸಿದೆ.

ರಫೀಕ್ ಇಬ್ರಾಹಿಂ ಸಾಬ್ ಸಯ್ಯದ್(27), ಹನೀಫ್ ಇಬ್ರಾಹಿಂ ಸಾಬ್ ಸಯ್ಯದ್(25) ನಾಪತ್ತೆಯಾದವರು. ಭಾನುವಾರ ಎಂಟು  ಜನ ಸ್ನೇಹಿತರು ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು(Fish Catching) ಹೋಗಿದ್ದರೆನ್ನಲಾಗಿದೆ. ಮೀನು ಹಿಡಿದು ಮರಳಿ ಬರುತ್ತಿರುವಾಗ ಹಳ್ಳದ ನೀರು ಜಾಸ್ತಿಯಾಗಿ  ನೀರಿನ ರಭಸಕ್ಕೆ ಇಬ್ಬರುಬಕೊಚ್ಚಿ ಹೋಗಿದ್ದಾರೆನ್ನಲಾಗಿದೆ.

ಸಹೋದರರಿಬ್ಬರು ಗೌಂಡಿ ಕೆಲಸ ಮಾಡುತ್ತಿದ್ರು ನಿನ್ನೆ  ಸ್ನೇಹಿತರೊಂದಿಗೆ  ಮೀನು ಹಿಡಿಯಲು ತೆರಳಿದ್ದರು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ(Yallapur Police Station) ಪ್ರಕರಣ ದಾಖಲಾಗಿದ್ದು ನಾಪತ್ತೆಯಾದವರಿಗಾಗಿ  ಶೋಧ ನಡೆಸಲಾಗಿದೆ.

ಇದನ್ನು ಓದಿ : ಬೆಂಗಳೂರಿಗೆ ಬಂದು ಮರಳಿದ ಮೋದಿ.ಜೊತೆಗೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್. ರಾಜಕೀಯ ಪಡಸಾಲೆಯಲ್ಲಿ ಚರ್ಚೆ.

ಟೈಲ್ಸ್ ಕೆಲಸಕ್ಕೆ ಬಂದವರು ಮಾರುಕೇರಿಯಲ್ಲಿ ಅಡಿಕೆ ಕದ್ದರು.