ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) : ಬೇಡ್ತಿ ನದಿ ಸೇರುವ ಹಳ್ಳದಲ್ಲಿ ಕೊಚ್ಚಿ ಹೋದ ಸಹೋದರರಲ್ಲಿ ಒಬ್ಬಾತ ಶವವಾಗಿ ಪತ್ತೆಯಾಗಿದ್ದಾನೆ.
ಹನೀಪ್ ಇಬ್ರಾಹಿಂ ಸಾಬ್(25) ಮೃತ ದೇಹ ಸೋಮವಾರ ನೀರಿನ ಆಳದಲ್ಲಿ ಪತ್ತೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ಮಾದನಸರದ ಕವಲಗಿ ಹಳ್ಳ ದಾಟಿ 8 ಜನ ಸ್ನೇಹಿತರು ಮೀನು ಹಿಡಿಯಲು ತೆರಳಿದ್ದರು. ಹಳ್ಳದಲ್ಲಿ ಮೀನುಗಾರಿಕೆ ನಡೆಸಿ ಸಂಜೆ ಊರಿಗೆ ಮರಳುತ್ತಿದ್ದಾಗ ಏಕಾಏಕಿ ನೀರು ಹೆಚ್ಚಾಗಿ ಮೂವರು ಕೊಚ್ಚಿ ಹೋಗಿದ್ದರು. ಆ ಪೈಕಿ ಒಬ್ಬರ ರಕ್ಷಣೆ ಮಾಡಲಾಗಿದ್ದು ಇನ್ನಿಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಭಾನುವಾರದಿಂದ ಹುಡುಕಾಟ ನಡೆಸಿದರೂ ಕಣ್ಮರೆಯಾದವರ ಸುಳಿವು ಸಿಗಲಿಲ್ಲ. ಸೋಮವಾರ ಮಧ್ಯಾಹ್ನದ ವೇಳೆ ನೀರಿನ ಆಳದಲ್ಲಿದ್ದ ಒಂದು ಶವವನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪತ್ತೆ ಮಾಡಿದರು. ಸ್ಥಳೀಯರೆಲ್ಲರೂ ಸೇರಿ ಆ ಶವವನ್ನು ಮೇಲಕ್ಕೆತ್ತಿದ್ದಾರೆ. ಇನ್ನೂ ರಫೀಕ್ ಇಬ್ರಾಹಿಂ ಸಾಬ್ ಸಯ್ಯದ್( 27) ಗಾಗಿ ಹುಡುಕಾಟ ಮುಂದುವರಿದಿದೆ.
ಇದನ್ನು ಓದಿ : ಮೀನು ಹಿಡಿಯಲು ಹೋದ ಸಹೋದರರು ನಾಪತ್ತೆ.