ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದೆಹಲಿ(Delhi) : ಸಿಎಂ ರೇಖಾ ಗುಪ್ತಾ (CM Rekha Gupta) ಅವರ ಮೇಲೆ ಅಪರಿಚಿತ ವ್ಯಕ್ತಿಯೋರ್ವ  ಹಲ್ಲೆ ನಡೆಸಿದ ಘಟನೆ  ಬೆಳಿಗ್ಗೆ ನಡೆದಿದೆ. 

ಜನ ಸುವಾಯಿ ಎಂಬ ಕಾರ್ಯಕ್ರಮ ನಡೆಸುವ ದೆಹಲಿ ಸಿಎಂ(Delhi CM) ರೇಖಾ ಗುಪ್ತಾ ಅವರು ಖುದ್ದಾಗಿ ಜನರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸುತ್ತಾರೆ. ಇಂದು ಬೆಳಿಗ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವೇಳೆ ರೇಖಾ ಗುಪ್ತಾ(Rekha Gupta) ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎನ್ನಲಾಗಿದೆ. ಆದರೆ  ಹಲ್ಲೆಗೆ ಇದುವರೆಗೂ ನಿಖರ ಕಾರಣ ತಿಳಿದುಬಂದಿಲ್ಲ.

ಘಟನೆಯಲ್ಲಿ ರೇಖಾ ಗುಪ್ತಾ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು  ತಿಳಿದುಬಂದಿದೆ. ಕೂಡಲೇ ಭದ್ರತಾ ಸಿಬ್ಬಂದಿಗಳು ಗುಪ್ತಾರನ್ನು ರಕ್ಷಿಸಿ, ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ದೂರು ನೀಡುವ ಸೋಗಿನಲ್ಲಿ ಅಪರಿಚಿತ ವ್ಯಕ್ತಿ ಸರದಿ ಸಾಲಿನಲ್ಲಿ ಬಂದು ನಿಂತಿದ್ದ. ಸಿಎಂ ರೇಖಾ ಗುಪ್ತಾ(CM Rekha Gupta) ಅವರನ್ನು ಭೇಟಿಯಾಗಲು ತನ್ನ ಸರದಿ ಬಂದಾಗ ಹಲ್ಲೆಗೆ ಯತ್ನಿಸಿದ್ದಾನೆಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದ್ದು ಪೊಲೀಸರು ವಿಚಾರಣೆ(Police Enquiry) ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ.

ಇದನ್ನು ಓದಿ :   ಅಗಸ್ಟ್ 20ರಂದು ಈ ತಾಲೂಕಿನ  ಶಾಲೆಗಳಿಗೆ ಮಾತ್ರ ರಜೆ.

ಪತ್ನಿ ಸಾವಿನಿಂದ ಮನನೊಂದು ಪತಿ ನೇಣಿಗೆ ಶರಣು.