ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ನರ್ಸ್ ವೇಷದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಶಿಶುವೊಂದನ್ನ ಅಪಹರಣ ಮಾಡಿದ್ದರಿಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು   ಶಿಶುವನ್ನ ಕೊನೆಗೂ ತಾಯಿಯ ಮಡಿಲು ಸೇರಿಸಿದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ(Kalaburgi District) ಚಿತ್ತಾಪುರ ತಾಲೂಕಿನ(Chittapura Taluku) ರಾವೂರ್ ಗ್ರಾಮದ ದಂಪತಿಗಳಾದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಗೆ ಜನಿಸಿದ ಮಗುವನ್ನು ನಗರದ ಜಿಮ್ಸ್ ಸರ್ಕಾರಿ ಆಸ್ಪತ್ರೆಯಿಂದ(Gims Government Hospital) ಸೋಮವಾರ ಅಪಹರಿಸಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ನಗರದ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ಘಟಕದಿಂದ ಆಸ್ಪತ್ರೆಯ ನರ್ಸ್ ವೇಷ ಧರಿಸಿ ಬಂದಿದ್ದ ಇಬ್ಬರು ಮಹಿಳಾ ಕಳ್ಳರು ಶಿಶುವಿನ ರಕ್ತ ಪರೀಕ್ಷೆ ಮಾಡಿಸಬೇಕು ಎಂದು ನೆಪ ಹೇಳಿ, ಮಗುವಿನ ಅಪಹರಣ(Kidnap) ಮಾಡಿದ್ದರು.

ಶಿಶುವಿನ ಅಪಹರಣ ಕುರಿತು ಬ್ರಹ್ಮಪುರ ಪೋಲಿಸ್‌ ಠಾಣೆಯಲ್ಲಿ (Brahmapura police Station) ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೋಲಿಸರು, ಮಗುವಿನ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಿ, ತ್ವರಿತವಾಗಿ ತನಿಖೆ ನಡೆಸುವ ಮೂಲಕ ಬುಧವಾರ ನಸುಕಿನ ಜಾವದಲ್ಲಿ ಅಪಹರಣವಾದ ಗಂಡು ಶಿಶುವನ್ನು ತಾಯಿಯ ಮಡಿಲಿಗೆ ಸೇರಿಸಿದ್ದಾರೆ. ಅಪಹರಿಸಿದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉಮೇರಾ, ನಸರೀನ್ ಹಾಗು ಫಾತಿಮಾ ಬಂಧಿತ ಮಕ್ಕಳ ಕಳ್ಳಿಯರು. ಕಳ್ಳತನದ ಬಳಿಕ ಖೈರುನ್ ಎಂಬ ಮಹಿಳೆಗೆ 50 ಸಾವಿರಕ್ಕೆ ಮಗು ಮಾರಾಟ ಮಾಡಿದ್ದಾಗಿ ಗೊತ್ತಾಗಿದೆ. ಖೈರುನ್ ಈಗ ನಾಪತ್ತೆಯಾಗಿದ್ದಾಳೆ.

ಇದನ್ನು ಓದಿ : ಇನ್ನೂ ಮರೆಯದ ರಾಜು ತಾಂಡೇಲ್

ಸಂಸದ ಕಾಗೇರಿ ರಕ್ಷಣಾ ಮಂತ್ರಿ ಭೇಟಿ

ಹಿರಿಯ ಕಲಾವಿದ ನಿಧನ