ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಪಟ್ಟಣದ ರಾ. ಹೆದ್ದಾರಿಯಲ್ಲಿ(National Highway) ಎರಡು ದಿನದ  ಹಿಂದಷ್ಟೇ ನಡೆದ ರಸ್ತೆ ಅಪಘಾತದ ಸ್ಥಳದಲ್ಲಿ ಮತ್ತೊಂದು ಅಪಘಾತ ಸಂಭವಿಸಿ ಬೈಕ್ ಸವಾರನೋರ್ವ(Bike rider) ಸಿನಿಮಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ  ನಡೆದಿದೆ.

ಇಲ್ಲಿನ ನೂರ್ ಮಸೀದಿ ಮುಂಭಾಗದಲ್ಲಿ  ಬೈಕ್ ಹಾಗೂ ಮೀನು ಗಾಡಿಯ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಅದೃಷ್ಟವಶಾತ್ ಬೈಕ್ ಸವಾರ ಪಾರಾಗಿದ್ದಾನೆ. ಅಪಘಾತ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉಡುಪಿ ಕಡೆಯಿಂದ ಮುರ್ಡೇಶ್ವರ (Udupi to Murdeshwar) ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ತೆರಳುತ್ತಿದ್ದ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಸಣ್ಣ ಗುಂಡಿಗಳನ್ನು ತಪ್ಪಿಸಲು ಹೋದ ವೇಳೆ ಮುಂಭಾಗದಿಂದ ತೆರಳುತ್ತಿದ್ದ   ಮೀನು ತುಂಬಿದ ಮಿನಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅದೃಷ್ಟವಶಾತ್ ಬೈಕ್ ಸವಾರ ಕೊಂಚದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಶನಿವಾರ ಬೆಳಿಗ್ಗೆ ಇದೇ ಸ್ಥಳದಲ್ಲಿ ದಂಪತಿಗಳಿಬ್ಬರು ದೇವಸ್ಥಾನಕ್ಕೆ ತೆರಳುವ ವೇಳೆ ಟ್ಯಾಂಕರ್ ಹರಿದು ಬೈಕ್ ಸವಾರ ಸ್ಥಳದ್ದಲ್ಲೇ ಸಾವನ್ನಪ್ಪಿದ್ದರು.  ಘಟನೆ ಮಾಸುವ ಮುನ್ನವೇ  ಇನ್ನೊಂದು ಅಪಘಾತ ಸಂಭವಿಸಿರುವುದು ಆತಂಕ ಮೂಡಿಸಿದೆ.

ಭಟ್ಕಳ ನಗರದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ಬಹಳ ಸಮಯದಿಂದ ಸ್ಥಗಿತಗೊಂಡಿದೆ. ಇತ್ತೀಚಿನ ಮಳೆಯಿಂದಾಗಿ ರಸ್ತೆಯ ಸ್ಥಿತಿ ಹದಗೆಟ್ಟಿದ್ದು,  ಗುಂಡಿಗಳ ರಾಶಿಯೇ ಸೃಷ್ಟಿಯಾಗಿವೆ.. ಇದರಿಂದ  ಬೈಕ್ ಸವಾರರು ಈ ಗುಂಡಿಗಳನ್ನು ತಪ್ಪಿಸಲು ಹೋಗಿ  ಅಪಘಾತಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಇದನ್ನು ಓದಿ : ಭಟ್ಕಳದಲ್ಲಿ ಬೆಂಕಿ ಅನಾಹುತ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ.

ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಈ ರೀತಿಯಾಗಿ ಆಚರಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.

ಖಾಸಗಿ ಪೋಟೋ ಇದೆಯೆಂದು ಲಕ್ಷಲಕ್ಷ ಪೀಕಲು ಮುಂದಾದ ಮೂವರು ಆರೆಸ್ಟ್.