ಶಿರಸಿ (SIRSI): ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ತಾಲೂಕಿನ ಇಟಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಗದ್ದೆ ಗ್ರಾಮದ ಹುಣಸೆಹಳ್ಳಿ ಹತ್ತಿರ ಈ ದಾಳಿ ನಡೆದಿದೆ. ದಾಳಿ ಸಂಬಂಧ ಐವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಒಟ್ಟು 5240 ರೂ ವಶಪಡಿಸಿಕೊಳ್ಳಲಾಗಿದೆ.
ಸಿದ್ದಾಪುರ(SIDDAPUR) ತಾಲೂಕಿನ ದತ್ತು ಮಾಬ್ಲು ಗೌಡ, ಸಿರ್ಸಿ ತಾಲೂಕಿನವರಾದ ಶ್ರೀಕಾಂತ್ ಮಾಬ್ಲು ಗೌಡ, ಶ್ರೀಕಾಂತ ಮಾಬ್ಲು ಗೌಡಾ, ಗೋಪಾಲ ಹೊನ್ನಾ ಗೌಡಾ, ಗೋಪಾಲ ರಾಮಾ ನಾಯ್ಕ ಹಾಗೂ ಗೋಪಾಲ ಕೃಷ್ಣಾ ಗೌಡಾ ಎಂಬುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಆಯ್ ದಯಾನಂದ ಜೋಗಳೆಕರ್ ಮತ್ತವರ ಸಿಬ್ಬಂದಿಗಳು ಈ ದಾಳಿ ನಡೆಸಿದ್ದು ಶಿರಸಿ ಗ್ರಾಮೀಣ ಠಾಣೆಯಲ್ಲಿ (SIRSI RURAL STATION) ಪ್ರಕರಣ ದಾಖಲಾಗಿದೆ..
ಇದನ್ನು ಓದಿ : ಶಿರೂರು ಕಾರ್ಯಾಚರಣೆ ಸ್ಥಗಿತ