ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಮನೆಯಿಂದ ನಾಪತ್ತೆಯಾದ ಯುವತಿ ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿ ಪೋಲಿಸ ಠಾಣೆಯಲ್ಲಿ(Police Station) ಪ್ರತ್ಯಕ್ಷಳಾದ ಘಟನೆ ನಡೆದಿದೆ.
ಅಂಕೋಲಾ(Ankola) ತಾಲೂಕಿನ ಅಗ್ರಗೋಣದ ಅಡಿಗೋಣ ಬೈಲಕೇರಿಯ ನಿವಾಸಿ ಚಂದ್ರಕಲಾ ನೀಲಕಂಠ ಗೌಡ (20) ಎಂಬಾಕೆ ಸೆಪ್ಟೆಂಬರ್ ಒಂದರಂದು ಕಾಣೆಯಾದ(Missing) ಕುರಿತು ಈಕೆಯ ತಂದೆ ನಿಲಂಕಠ ಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಯುವತಿ ಚಂದ್ರಕಲಾ ಅಗ್ರಗೋಣ ಗ್ರಾಮದವನೇ ಆದ ಸಾಯಿನಾಥ ಶೇಟ್ ಎಂಬಾತನನ್ನು ಪ್ರೇಮಿಸುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಆಕೆ ಮನೆಯಿಂದ ಓಡಿ ಹೋಗಿದ್ದಳು. ಅಂಕೋಲಾದಿಂದ ಬೆಳಗಾವಿ ಕಡೆ ಹೋಗಿದ್ದ ಈ ಜೋಡಿ ಅಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾದ ಯುವತಿ ಕುರಿತು ದೂರು ದಾಖಲಾಗಿದ್ದನ್ನು ಗಮನಿಸಿದ ಇವರು ಅಲ್ಲಿಂದ ನೇರವಾಗಿ ಅಂಕೋಲಾ ಪೊಲೀಸ್ ಠಾಣೆಗೆ(Ankola Police Station) ಬಂದಿದ್ದಾರೆ. ಈ ಸಮಯದಲ್ಲಿ ಪೊಲೀಸರ ಎದುರು ತಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಈಗ ಮದುವೆ ಆಗಿದ್ದಾಗಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಯುವಕ ಮತ್ತು ಯುವತಿ ಮನೆಯವರನ್ನು ಕರೆಯಿಸಿ ವಿಷಯ ತಿಳಿಸಿದ್ದಾರೆ. ಆಗ ಮನೆಯವರು ಒಪ್ಪಿಕೊಂಡು ಹುಡುಗನ ಜೊತೆ ಯುವತಿಯನ್ನು ಕಳುಹಿಸಿದ್ದಾರೆ. ಅಂಕೋಲಾದಲ್ಲಿ ನಾಪತ್ತೆಯಾದ ಪ್ರಕರಣವೊಂದು ಮದುವೆಯಾಗುವ ಮೂಲಕ ಸುಖಾಂತ್ಯ ಕಂಡಿದೆ.
ಇದನ್ನು ಓದಿ : ಶಿರಸಿಯಲ್ಲಿ ಗುಂಡು ತಗುಲಿ ಬಾಲಕ ಸಾವು: ಪ್ರಕರಣಕ್ಕೆ ತಿರುವು, ಇಬ್ಬರು ವಶಕ್ಕೆ.
	
						
							
			
			
			
			
