ಭಟ್ಕಳ : ತಾಲೂಕಿನ ಹೆಬಳೆ ಗ್ರಾಮದ ನಾಗರಾಜ ಗೋಪಾಲ ಶೆಟ್ಟಿ, ಹೆರ್ತಾರ 2024 ನೆಯ ಸಾಲಿನ ಚಾರ್ಟೆಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಪಾಸಾಗಿದ್ದಾನೆ.
ಹೆರ್ತಾರಿನ ವ್ಯಾಪಾರಿ ಗೋಪಾಲ್ ಶೆಟ್ಟಿ ಮತ್ತು ಸುನಂದ ಶೆಟ್ಟಿ ಅವರ ಪುತ್ರನಾಗಿದ್ದಾನೆ. ಈ ಬಾರಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪಾಸಾಗಿ ಇಡೀ ಊರಿಗೆ ಕೀರ್ತಿ ತಂದಿದ್ದಾನೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯನ್ನ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದರು. ಬೆಂಗಳೂರಿನ ಜಿ ಎನ್ ಬಿ ಅಸೋಸಿಯೇಟ್ಸ್ ನಲ್ಲಿ ತರಬೇತಿ ಪಡೆದಿದ್ದರು.
ನಾಗರಾಜ್ ಅವರ ಸಾಧನೆಗೆ ಕುಟುಂಬದವರು, ಶಿಕ್ಷಕ ವೃಂದದವರು, ಶಿಕ್ಷಣಾಭಿಮಾನಿಗಳು, ಹೆಬಳೆ ಗ್ರಾಮದ ಸಮಸ್ತ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ವಿಶೇಷವಾಗಿ ಶಿಕ್ಷಕ ಹಾಗೂ ಸಾಹಿತಿಗಳಾದ ಚಂದ್ರಶೇಖರ ಪಡುವಣಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಈತನ ಸಾಧನೆ ಇನ್ನೂ ಮುಂದುವರೆಯಲಿ ಎಂದು ಹಾರೈಸಿದ್ದಾರೆ.
ವಿಶೇಷವಾಗಿ ಹೆರ್ತಾರ್ ಗ್ರಾಮದ ಇನ್ನೋಬ್ಬ ಯುವತಿ ಕಲ್ಪನಾ ಮೊಗೇರ ಕೂಡ ಸಿಎ ಪಾಸಾಗಿ ಗಮನ ಸೆಳೆದಿದ್ದಾಳೆ. ಇವರಿಬ್ಬರೂ ಒಂದೇ ಕಡೆ ಶಿಕ್ಷಣ ಪೂರೈಸಿರೋದು ವಿಶೇಷ.