ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೊಯಿಡಾ(Joida) :  ತಾಲೂಕಿನ ಶಿಂಗರಗಾವ(Singergav) ಗ್ರಾಮ ಪಂಚಾಯತ ವ್ಯಾಪ್ತಿಯ ಅಮೇಶೆತ್  ಗ್ರಾಮದಲ್ಲಿ ದೇವರ ವಿಷಯಕ್ಕೆ  ಜಗಳವಾಗಿ ಮಹಿಳೆಯೋರ್ವಳು ಕೊಲೆಯಾದ  ಘಟನೆ ನಡೆದಿದೆ.

ಭಾಗ್ಯಶ್ರೀ ಸೋನು ವರಕ ಎಂಬಾಕೆಯನ್ನು ಅವಳ ಸ್ವಂತ ಭಾವನೇ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.  ದೊಂಡು ವರಕ ಎಂಬಾತನೇ  ಕೊಲೆ ಮಾಡಿದವ ಎಂದು ಹೇಳಲಾಗಿದೆ.

ಕೊಲೆಯಾದ ಭಾಗ್ಯಶ್ರೀ ಮತ್ತು ಕೊಲೆ ಮಾಡಿದ ದೊಂಡು ಎಂಬುವವರು ಒಂದೇ ಕುಟುಂಬದ ಸದಸ್ಯರಾಗಿದ್ದು, ಕಳೆದ ಐದು ವರ್ಷಗಳಿಂದ ಮೂಲ ದೇವರು(Native God) ನಮ್ಮ ಮನೆಯಲ್ಲಿ ಇರಬೇಕು. ನಮ್ಮ ಮನೆಯಲ್ಲಿ ಇರಬೇಕು ಎಂದು ಜಗಳಗಳು ನಡೆಯುತ್ತಿತ್ತು ಎನ್ನಲಾಗಿದೆ, ಊರಿನ ಹಿರಿಯರು ಹಿಂದೆ ಸಭೆ ಮಾಡಿ  ಭಾಗಶ್ರೀ ಮನೆಯಲ್ಲಿಯೇ ದೇವರು ಇರಲಿ ಎಂಬ ನಿರ್ಣಯ  ತೆಗೆದುಕೊಂಡಿದ್ದರು.

ದೇವರು ನನ್ನ ಮನೆಯಲ್ಲಿ ಇಲ್ಲದ ಕಾರಣ ದೊಂಡು ವರಕ ತನ್ನ ಮಗನಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ ಎಂದು  ಜಗಳ ಮಾಡಿ ನಿನ್ನೆ ಗುರುವಾರ ಕುಟಾರಿಯಿಂದ ತಲೆಗೆ  ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ತಾಯಿಯನ್ನು ಕಳೆದುಕೊಂಡ ನಾಲ್ವರು ಮಕ್ಕಳು ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.  ಸ್ಥಳಕ್ಕೆ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ದೀಪನ್ ಎನ್, ದಾಂಡೇಲಿ ಡಿ ವೈ ಎಸ್ ಪಿ ಶಿವಾನಂದ ಎಮ್, ಜೋಯಿಡಾ ಸಿ.ಪಿ.ಐ ಚಂದ್ರಶೇಖರ ಹರಿಹರ, ರಾಮನಗರ ಪಿ.ಎಸ್ ಐ ಮಹಾಂತೇಶ ನಾಯಕ ಭೇಟಿ ನೀಡಿದ್ದಾರೆ.

ರಾಮನಗರ ಪೊಲೀಸ್ ಠಾಣೆಯಲ್ಲಿ(Ramanagar Police Station) ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೋಲಿಸರು ಕೊಲೆಗಾರ ಹುಡುಕಾಟ ನಡೆಸಿದ್ದಾರೆ.
ಇದನ್ನು ಓದಿ : ಬೆಣ್ಣೆಹೊಳೆ ಪಾಲ್ಸನಲ್ಲಿ ನಾಪತ್ತೆಯಾದ ಯುವಕನ ಮೃತದೇಹ  ಪತ್ತೆ.

ಶಾಸಕ ಸತೀಶ್ ಸೈಲ್ ಗೆ ಮದ್ಯಂತರ ಜಾಮೀನು ಮಂಜೂರು.

ಶಿರಸಿ ಮಾರಿಕಾಂಬಾ ದೇವಾಲಯ ರಸ್ತೆ ಅಗಲೀಕರಣ ಯಾವಾಗ ಮಾಡುತ್ತೀರಿ? ಶಾಸಕರೇ, ಸಂಸದರೇ!