ಭಟ್ಕಳ(BHATKAL): ಮೇವು ತಿನ್ನಲು ಹೋಗಿದ್ದ ಗೋವನ್ನೆ  ವದೆ ಮಾಡಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದ ಘಟನೆ ಮುಟ್ಟಳ್ಳಿ ಗ್ರಾಮ ಪಂಚಾಯತ (Muttalli Grama Panchayat) ತಲಾಂದ(Taland) ಬಳಿ  ನಡೆದಿದೆ.

ಮಂಜುನಾಥ ಸೋಮಯ್ಯ ಗೊಂಡ ಎನ್ನುವವರ ಗೋವುಗಳ್ಳರ ಅಟ್ಟಹಾಸಕ್ಕೆ ಗುರಿಯಾಗಿದೆ. ಮಂಗಳವಾರ ಸಂಜೆ ತಲಾಂದ  ಸಮೀಪವಿದ್ದ ಹೊಳೆ ಬಳಿ ಎಮ್ಮೆ (Buffalo) ಮೇವು (Gross) ತಿನ್ನುತ್ತಿರುವುದನ್ನು ಮನೆಯವರು ನೋಡಿದ್ದರು. ನಂತರ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ರಾತ್ರಿ  ಹುಡುಕಾಡಿದರೂ ಸಿಕ್ಕಿರಲಿಲ್ಲ.  ಇಂದು ಬೆಳಿಗ್ಗೆಯಿಂದ ಮತ್ತೆ ಹುಡುಕಾಟ ನಡೆಸಿದಾಗ  ಮೇವು ತಿನ್ನಲು ಬರುವ ಸ್ಥಳದಲ್ಲಿ ವದೆ ಮಾಡಿ ರುಂಡ ಹಾಗೂ  ಅವಶೇಷಗಳನ್ನು ಅಲ್ಲೇ ಸಮೀಪವಿದ್ದ ಬಾವಿಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು(Bhatkal Rural Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎರಡು ವಾರದ ಹಿಂದಷ್ಟೇ ಇದೆ ರೀತಿ ಕಳ್ಳತನ ಮಾಡಿಕೊಂಡು ಬಂದ ಗೋವನ್ನು ವದೆ ಮಾಡಿ ರುಂಡ ಮತ್ತು ಅವಶೇಷಗಳನ್ನು ಅಲ್ಲೇ ಬಿಟ್ಟು ಹೋಗಿದ್ದರು. ಮತ್ತೆ ಗೋಕಳ್ಳರ ಅಟ್ಟಹಾಸ ಹೆಚ್ಚಾಗಿದ್ದು. ಅದೇ ರೀತಿ ಘಟನೆ ಮತ್ತೆ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮರುಕಳಿಸಿದೆ.

ಜಾಲಿಯಲ್ಲಿ ಗೋವು ಕಳ್ಳತನ (Cow Theft) ನಡೆಸಿದ ಮೂವರನ್ನ ಪೊಲೀಸರು ಬಂಧಿಸಿ ನಿಟ್ಟುಸಿರು ಬಿಡುವಾಗಲೇ ಮತ್ತೆ ಈ ರೀತಿ ಗೋವುಗಳ ಮೇಲೆ ಅಟ್ಟಹಾಸ ಮೆರೆಯುತ್ತಿರುವುದು ರೈತ ಸಮೂಹ ಕಂಗಾಲಾಗುವಂತೆ ಮಾಡಿದೆ. ಸಾಕಿದ ದನಕರುಗಳನ್ನ ಈ ರೀತಿಯಾಗಿ ದುಷ್ಕರ್ಮಿಗಳು ವಧೆ ಮಾಡುತ್ತಾ ಹೋದರೆ ರೈತ ಸಮೂಹ(Farmers Group’s) ರೊಚ್ಚಿಗೇಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಕಟುಕರನ್ನ ಸದೆ ಬಡಿಯುವ ಕೆಲಸ ಪೊಲೀಸ್ ಇಲಾಖೆ(Police Department) ಮಾಡಬೇಕಾಗಿದೆ.

ಇದನ್ನು ಓದಿ : ಅಕ್ಟೋಬರ್ 26 ರಂದು ಕಾರವಾರದಲ್ಲಿ ಉದ್ಯೋಗ ಮೇಳ

ಶಿರಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಪ್ಪನೇ ಬಿದ್ದ ಆಲದ ಮರದ ಕೊಂಬೆ

ಟೋಲ್ ಪ್ಲಾಜಾ ಸ್ಥಳಾಂತರ ಮಾಡುವಂತೆ ಆಗ್ರಹ.