ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ಕೈಗಾದಿಂದ ಯಲ್ಲಾಪುರ(Kaiga to Bare) ಮಾರ್ಗಕ್ಕೆ ತೆರಳುವ ಬಾರೆ  ಗ್ರಾಮದ ಬಳಿ ಹುಲಿಯೊಂದು(Tiger) ವಾಹನ ಸವಾರರಿಗೆ  ಎದುರಾದ ಘಟನೆ ನಡೆದಿದೆ.

ಹುಲಿ ಕಂಡು ಒಮ್ಮೆಲೆ  ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.‌ ಕಾರಿನ ಗಾಜನ್ನು ಸರಿಸಿ   ತಮ್ಮ ಮೊಬೈಲ್ ನಲ್ಲಿ ಫೋಟೋ ಮತ್ತು ವಿಡಿಯೋ  ಮಾಡಿಕೊಂಡಿದ್ದಾರೆ. ವಾಹನ ಮುಂಭಾಗದ ರಸ್ತೆಯಲ್ಲಿ ರಾಜ ಗಾಂಭಿರ್ಯದಿಂದ ನಡೆದ ಹುಲಿ(Tiger) ಕೆಲ ಹೊತ್ತಿನಲ್ಲಿ  ಕಾಡಿನೊಳಗೆ ಸೇರಿಕೊಂಡಿದೆ.

ಕೈಗಾ(Kaiga) ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಓಡಾಟ ಸಾಮಾನ್ಯವಾಗಿದ್ದು ಈ ಹಿಂದೆ ಸಹ ಹಲವು ಬಾರಿ ಹುಲಿ ವಾಹನ ಸವಾರರಿಗೆ ಕಂಡು ಬಂದಿದೆ. ಹಗಲಿನಲ್ಲಿ ಹುಲಿಗಳ ದರ್ಶನವಾಗಿದ್ದು ತೀರಾ ಅಪರೂಪವಾಗಿದ್ದು, ಹಿಂದೊಮ್ಮೆ ರಾತ್ರಿ ವೇಳೆ ಕೈಗಾ ಅಣುವಿದ್ಯುತ್ ಸ್ಥಾವರದ(Kaiga Power Plant) ಗೇಟ್ ಬಳಿ ಕಾಣಿಸಿಕೊಂಡಿತ್ತು. ಆದರೆ  ಹಗಲಿನಲ್ಲೇ ಹುಲಿಯ ಓಡಾಟ ಕಂಡುಬಂದಿರುವುದರಿಂದ ಈ ಭಾಗದಲ್ಲಿ ಓಡಾಡುವ ಗ್ರಾಮಸ್ಥರಿಗೆ ಆತಂಕ ಉಂಟುಮಾಡಿದೆ.

ಇದನ್ನು ಓದಿ : ಗಣೇಶ ಮೆರವಣಿಗೆಯಲ್ಲಿ ಭೀಕರ ದುರಂತ. ಎಂಟು‌ ಜನರ ದುರ್ಮರಣ.

ಅವೈಜ್ಞಾನಿಕ ಡಂಪಿಂಗ್ ಯಾರ್ಡ್ ನಿಂದ ಮಕ್ಕಳಿಗೆ ಉಸಿರುಗಟ್ಟುವ ವಾತಾವರಣ.