ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ (Panaji): ರಾಷ್ಟ್ರೀಯ ಶಿಕ್ಷಣ ನೀತಿ(National Education Policy) ಅನುಸಾರ ಗೋವಾದಲ್ಲಿ ಶಿಕ್ಷಣ ಇಲಾಖೆ(Goa Education Department) ಏಪ್ರಿಲ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸಲು ನಿರ್ಧರಿಸಿದೆ.
ಮೇ 1 ರಿಂದ ಜೂನ್ 4 ರವರೆಗೆ ಬೇಸಿಗೆ ರಜೆ ಇರಲಿದ್ದು ಜೂನ್ 4 ರಿಂದ ತರಗತಿಗಳು ಪುನರಾರಂಭಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
6 ರಿಂದ 10 ಮತ್ತು 12 ನೇಯ ತರಗತಿಗಳಿಗೆ ಏಪ್ರಿಲ್ ನಲ್ಲಿ ಬೆಳಿಗ್ಗೆ 11.30 ರ ವರೆಗೆ ಮಾತ್ರ ತರಗತಿಗಳು ಇರಲಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ(NEP) ಪ್ರಕಾರ ವಾರಕ್ಕೆ 36 ರಿಂದ 39 ಗಂಟೆಗಳ ಕಾಲ ಶಾಲಾ ತರಗತಿಗಳನ್ನು ನಡೆಸುವುದು ಕಡ್ಡಾಯವಾಗಿದೆ. ಈ ದಿನಗಳನ್ನು ತುಂಬಲು ಏಪ್ರಿಲ್ ನಲ್ಲಿ ತರಗತಿಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಹಿಂದೆ ಹೊಸ ಶೈಕ್ಷಣಿಕ ವರ್ಷ(Education Year) ಜೂನ್ ನಲ್ಲಿ ಆರಂಭಗೊಂಡು ಏಪ್ರಿಲ್ ನಲ್ಲಿ ಅಂತಿಮ ಪರೀಕ್ಷೆ ನಡೆದು ನಂತರ ಶಾಲೆಗಳಿಗೆ ರಜೆ ನೀಡಲಾಗುತಿತ್ತು.
ಇದನ್ನು ಓದಿ : ಮನೆ ಕಳ್ಳತನ. ಠಾಣೆಯಲ್ಲಿ ದೂರು ದಾಖಲು.
ಕಾರವಾರದಲ್ಲಿ ತಂಜಿಮ್ ಪತ್ರಿಕಾಗೋಷ್ಠಿ. ಸಾಲ್ಕೋಡು ಗೋ ಹತ್ಯೆ ಘಟನೆಗೆ ಖಂಡನೆ.
ಗೋ ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿ ಬಂಧನ.
10 ದಿನಗಳಲ್ಲಿ 10 ಕೋಟಿ ರೂ ಆದಾಯ! ಕುಂಭಮೇಳದಿಂದ ಊರಿಗೆ ಹೋದವಳ ಮ್ಯಾಜಿಕ್.