ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ತಾಲೂಕಿನ ಹೆಬಳೆ ಗ್ರಾಮ(Heble Village) ಪಂಚಾಯತ್ ವ್ಯಾಪ್ತಿಯ ಎರಡು ದೇವಸ್ಥಾನಗಳಲ್ಲಿ ಕಳ್ಳತನ(Temple Theft) ನಡೆದಿದೆ. ದೇವಸ್ಥಾನದ ಹುಂಡಿಯನ್ನು ಒಡೆದ ಕಳ್ಳರು ಹಣ ಕದ್ದು ಪರಾರಿಯಾಗಿದ್ದಾರೆ
ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ಹಣ ಕದ್ದು ಹುಂಡಿ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳತನಕ್ಕೂ ಮುಂಚೆ ಸಿಸಿಟಿವಿ ಕ್ಯಾಮರಾಗಳಿಗೆ ಬಟ್ಟೆ ಮತ್ತು ನೀರಿನ ಲೋಟ ಮುಚ್ಚಿ ಕೃತ್ಯ ಏಸಗಿದ್ದಾರೆ.
ಬಳಿಕ ದೇವಸ್ಥಾನದ ಅರ್ಧ ಕಿ.ಮೀ.ದೂರದಲ್ಲಿರುವ ಅರೇಕಲ್ ಜಟಕಾ ಮಹಾಸತಿ ದೇವಸ್ಥಾನಕ್ಕೆ ನುಗ್ಗಿ ಹುಂಡಿಯನ್ನೇ ಕದ್ದು ಎಸ್ಕೇಪ್ ಆಗಿದ್ದಾರೆ.
ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ(Dog Squad) ಹಾಗೂ ಬೆರಳಚ್ಚು ತಜ್ಞ(Fingerprint experts)ರು ದೌಡಾಯಿಸಿ ಪರಿಶೀಲಿಸಿದ್ದಾರೆ. ಕಳ್ಳತನ ಘಟನೆಯಿಂದ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಆತಂಕಗೊಳ್ಳುವಂತಾಗಿದೆ.
ಈ ಹಿಂದೆ ಆದ ಕಳ್ಳತನದ ತನಿಖೆ ನಡೆಯುತ್ತಿರುವ ನಡುವೆ ಮತ್ತೆ ಶೇಡಬರಿಯಲ್ಲಿ ಕಳ್ಳತನ ನಡೆದಿರೋದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚುವುದಾಗಿ ಪೋಲೀಸರು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಹೆಬಳೆ-ಕುಕ್ಕನೀರ್ ವೆಂಕಟಾಪುರ ಮಾರ್ಗದಲ್ಲಿ ತಾಮ್ರದ ಹಂಡೆಯೊಂದು ಪತ್ತೆಯಾಗಿದ್ದು ಹೆಬಳೆಯ ದೇವಸ್ಥಾನ ಕಳ್ಳತನ ಮಾಡಿದ ಕಳ್ಳರ ಕೃತ್ಯವೆಂದು ಶಂಕಿಸಲಾಗಿದೆ. ಹಂಡೆಯ ಮೇಲೆ PB ಈರಮ್ಮ ಮಾಸ್ತಿ ಮೊಗೇರ ಎಂಬ ಹೆಸರು ಇರುವುದು ಕಂಡು ಬಂದಿದೆ. ಹಂಡೆಯನ್ನು ಪೋಲೀಸರು ವಶಪಡಿಸಿಕೊಂಡಿದ್ದು ತನಿಖೆ ನಡೆಸಲಾಗಿದೆ
ಇದನ್ನು ಓದಿ : ಶಾಂತಿ ಹುಡುಕಿ ಹೊರಟ ನಾರಾಯಣಜ್ಜ. ಕಳಚಿದ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ.
ಕಡವೆ ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವು, ಇನ್ನೋರ್ವ ಗಂಭೀರ.
ಭಟ್ಕಳದಲ್ಲಿ ಸೇವೆ ಸಲ್ಲಿಸಿದ್ದ ದಕ್ಷಿಣಕನ್ನಡ ಮೂಲದ ವೈದ್ಯ ಭೋಪಾಲ್ ನಲ್ಲಿ ನೇಣಿಗೆ ಶರಣು.