ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar): ಚಿಕಿತ್ಸೆಯ ನೆಪದಲ್ಲಿ ಪತ್ನಿಯನ್ನ ಹಳಗಾಕ್ಕೆ(Halga) ಕರೆ ತಂದು ಆಕೆಗೆ ಊಟದಲ್ಲಿ ವಿಷ ನೀಡಿ ಕೊಲೆ ಮಾಡಿ ಶವ ಏಸೆದು ಹೋದ ಪ್ರಕರಣವನ್ನ ಕಾರವಾರದ ಚಿತ್ತಾಕುಲ ಪೊಲೀಸರು(Chittakul Police) ಭೇದಿಸಿದ್ದಾರೆ.
ಬೀದರ್ ಮೂಲದ(Bidar Native) ಇಸ್ಮಾಯಿಲ್ ದಫೇದಾರ್ ಎಂಬಾತ ತನ್ನ ಮಿತ್ರನ ಮೂಲಕ ಕೃತ್ಯ ಏಸಗಿದ್ದಾನೆ. ಇಸ್ಮಾಯಿಲ್ ಮತ್ತು ಅಜಮುದ್ದೀನ್ ಮೊಹಮ್ಮದ ಹಾಗೂ ಇತರ ಇಬ್ಬರೊಂದಿಗೆ ಸೇರಿ ತನ್ನ ಪತ್ನಿ ಪರ್ವೀನ್ ಬೇಗಂ(45) ಎಂಬಾಕೆಯನ್ನು ಕಾರವಾರ(Karwar) ತಾಲೂಕಿನ ಹಳಗಾಕ್ಕೆ ಕರೆ ತಂದಿದ್ದ. ದಂಪತಿಗೆ ಆರು ಜನ ಮಕ್ಕಳಿದ್ದು ಎಲ್ಲರ ವಿವಾಹವೂ ಆಗಿದೆ ಎಂದು ತಿಳಿದು ಬಂದಿದೆ.
ಪತ್ನಿಯ ಶೀಲದ ಬಗ್ಗೆ ಶಂಕಿಸಿದ್ದ ಇಸ್ಮಾಯಿಲ್ ಆಕೆಯನ್ನು ಹಳಗಾದಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ ಕರೆದೊಯ್ಯುವಾಗ ಊಟದಲ್ಲಿ ವಿಷ ಬೆರಸಿದ್ದಾನೆ ಎಂದು ಹೇಳಲಾಗುತ್ತಿದೆ. ಆಕೆ ತಲೆ ಸುತ್ತಿ ಬಿದ್ದಾಗ ಆಕೆಯ ಶವವನ್ನು ಕಾರಿನಲ್ಲಿ ತುಂಬಿಕೊಂಡು 20 ದಿನಗಳ ಹಿಂದೆ ಕಾಡಿನಲ್ಲಿ ಎಸೆದು ಹೋಗಿದ್ದರು. ಬಳಿಕ ತನ್ನ ಪತ್ನಿ ಕಾಣೆಯಾಗಿರುವ ಬಗ್ಗೆ ಚಿತ್ತಾಕುಲ ಠಾಣೆಯಲ್ಲಿ(Chittakul Station) ದೂರು ದಾಖಲಿಸಿದ್ದ. ತನಿಖೆ ನಡೆಸಿದ್ದ ಪೊಲೀಸರು ಮೇಲ್ನೋಟಕ್ಕೆ ಕೊಲೆಯಾಗಿದೆ ಎಂಬುದನ್ನ ಪತ್ತೆ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಕೊಲೆಯಾದ ಪರ್ವಿನ್ ಬೇಗಂ ಪತಿ ಇಸ್ಮಾಯಿಲ್ ದಪೇದಾರ್ ನನ್ನು ಬಂಧಿಸಲಾಗಿದೆ.
ಇದನ್ನು ಓದಿ : ಹೊನ್ನಾವರದಲ್ಲಿ ಯುವಕರಿಬ್ಬರ ನಡುವೆ ಜಗಳ. ಚಾಕು ಇರಿದ ಅನ್ಯಕೋಮಿನ ವ್ಯಕ್ತಿಯ ಬಂಧನ.
ಅಂಕೋಲಾದಲ್ಲಿ ಭೀಕರ ಅಪಘಾತ. ಇಬ್ಬರ ದುರ್ಮರಣ.
ಭಟ್ಕಳದಲ್ಲಿ ಜಾನುವಾರು ಕಟಾವು ಮಾಡಿದ ದುರುಳರು. ಇಬ್ಬರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.