ಕುಂದಾಪುರ : ಹಟ್ಟಿ ಅಂಗಡಿ ಗ್ರಾಮ ಪಂಚಾಯತ್ ವಲಯದಲ್ಲಿರುವ ನಮ್ಮಭೂಮಿ, ರಾಜ್ಯ ಸಂಪನ್ಮೂಲ ಕೇಂದ್ರದಲ್ಲಿ ತರಬೇತಿಗಳು ಆರಂಭವಾಗಿವೆ.
ಆರು ತಿಂಗಳುಗಳ ಕಾಲ ಎಲೆಕ್ಟ್ರಿಕಲ್ & ಪ್ಲoಬಿಂಗ್ , ಕಾರ್ಪೆಂಟರಿ, ಗಾರ್ಮೆಂಟ್ಸ್, ಬ್ಯೂಟಿಷಿಯನ್, ಕಂಪ್ಯೂಟರ್ ತರಬೇತಿಗಳಿವೆ. 14 ರಿಂದ 18 ವರ್ಷ ವಯಸ್ಸಿನ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇದೆ.
ತರಬೇತಿಯ ಜೊತೆಗೆ ಜೀವನ ಕೌಶಲ್ಯ ತರಬೇತಿಗಳಾದ ಕೃಷಿ, ಹೈನುಗಾರಿಕೆ, ಅಡುಗೆ, ಯೋಗ, ಯಕ್ಷಗಾನ, ಭರತನಾಟ್ಯ, ಕರಾಟೆ, ಸೈಕಲಿಂಗ್, ಕ್ರೀಡೆ ಇತ್ಯಾದಿಗಳನ್ನು ಹೇಳಿಕೊಡಲಾಗುತ್ತದೆ.
SSLC ಪೂರ್ಣಗೊಳಿಸಲು ಅಸಾಧ್ಯವಾದ ಮಕ್ಕಳಿಗೆ ನೇರವಾಗಿ ಪರೀಕ್ಷೆ ಬರೆಯಲು, ಟ್ಯೂಷನ್ ಇನ್ನಿತರ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ನಮ್ಮ ಭೂಮಿ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಹೆಚ್ಚಿನಮಾಹಿತಿಗಾಗಿಸಂಪರ್ಕಿಸಬೇಕಾದಸಂಖ್ಯೆ : ದಿನೇಶ್ ಎಚ್ ಎಸ್ – 8310898769, ಪ್ರಮೀಳಾ ಶೆಟ್ಟಿ – 9480433292, ಸವಿತಾ – 9741407092 ಮತ್ತು ಕಛೇರಿ ಸಂಖ್ಯೆ – 8147578980.