ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ದೇಶದ ಜನರನ್ನುದ್ದೇಶಿ ಭಾಷಣ ಮಾಡುವ ಮೋದಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.
ಮೋದಿ ತುರ್ತಾಗಿ ದೇಶವನ್ನುದ್ದೇಶಿಸಿ ಭಾಷಣ ಘೋಷಣೆ ಮಾಡಿದಾಗ ಆತಂಕ, ಕುತೂಹಲ ಹೆಚ್ಚಾಗುವುದು ಸಾಮಾನ್ಯ. ಈ ಹಿಂದೆ ನೋಟ್ ಬ್ಯಾನ್ ಸೇರಿದಂತೆ ಹಲವು ನಿರ್ಧಾರಗಳನ್ನು ಮೋದಿ ಈ ಮೂಲಕ ಘೋಷಿಸಿದ್ದರು. ಹೀಗಾಗಿ ಇಂದು ಮೋದಿ ತಮ್ಮ ಭಾಷಣದಲ್ಲಿ ಮಹತ್ವದ ಘೋಷಣೆ ಮಾಡುತ್ತಾರೆ ಅನ್ನೋ ಕುತೂಹಲ ಜಾಸ್ತಿಯಾಗಿದೆ.
ಪ್ರಧಾನಿ ಮೋದಿ ಕಚೇರಿಯಿಂದ ಅಧಿಕೃತ ಟ್ವೀಟ್ ಮಾಡಿದ್ದು ಇಂದು (ಸೆ.21) ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿದೆ.
ಸೆಪ್ಟೆಂಬರ್ 22 ನಾಳೆಯಿಂದ ನವರಾತ್ರಿ ಹಬ್ಬದ ಆಚರಣೆ ಆರಂಭಗೊಳ್ಳುತ್ತಿದೆ. ಇಷ್ಟೇ ಅಲ್ಲ ಮೋದಿ ಸರ್ಕಾರದ ತೆಗೆದುಕೊಂಡು ಕ್ರಾಂತಿಕಾರಕ ನಿರ್ಧಾರವಾಗಿರುವ ಜಿಎಸ್ಟಿ ಕಡಿತ ನಾಳೆಯಿಂದ ಜಾರಿಯಾಗುತ್ತಿದೆ. ಹೀಗಾಗಿ ನವರಾತ್ರಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಜಿಎಸ್ಟಿ ಕಡಿತ ಜಾರಿ ಕುರಿತು ಮಹತ್ವದ ಅಪ್ಡೇಟ್ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ರೀಲ್ಸ್ ಅಂತಾ ರಿಯಲ್ ಮದುವೆಯಾದ ಯುಟ್ಯೂಬರ್. ಮತ್ತೊಂದು ದೂರು.