ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ನಾಲ್ಕು ದಿನದ ಹಿಂದೆ ಚಾಮರಾಜನಗರದಲ್ಲಿ ಬಾಲಕಿಯೋರ್ವಳು ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇನ್ನೋರ್ವ 8 ವರ್ಷದ ಬಾಲಕಿ ಅಸ್ವಸ್ತಗೊಂಡು ಸಾವು ಕಂಡಿದ್ದಾಳೆ.

ಗುಜರಾತ್‌ನ(Gujarat) ಅಹಮದಾಬಾದ್‌ನ (Ahamadabad) ಶಾಲೆಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿ ಕುಸಿದು ಬಿಳುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದೆ. ಝಬಾರ್ ಶಾಲೆಯ ಮೂರನೇ  ತರಗತಿಯ ವಿದ್ಯಾರ್ಥಿನಿಯು ಶಾಲೆಯಲ್ಲಿ ಅಸ್ವಸ್ಥತೆಗೊಂಡು ಬೆಂಚ್ ಮೇಲೆ ಕುಳಿತುಕೊಂಡಿದ್ದಳು. ಅದೇ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದಾದ ಕೆಲವು ಸೆಕೆಂಡುಗಳ ನಂತರ ಹತ್ತಿರದಲ್ಲೇ ನಿಂತುಕೊಂಡಿದ್ದ ಶಿಕ್ಷಕರು ಅವಳ ಸಹಾಯಕ್ಕೆ ಧಾವಿಸಿದ್ದಾರೆ. ಕೂಡಲೇ ಶಿಕ್ಷಕರು ಬಾಲಕಿಗೆ ಸಿಪಿಆ‌ರ್ ನೀಡಲು ಪ್ರಯತ್ನಿಸಿದರು. ಬಳಿಕ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ  ಪ್ರಯೋಜನವಾಗಿಲ್ಲ. ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಬಾಲಕಿಗೆ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ, ಶುಕ್ರವಾರ ಅಸ್ವಸ್ಥಳಾಗಿದ್ದ ಆಕೆ ಶಾಲೆಯ ಲಾಬಿಯಲ್ಲಿ ಬೆಂಚ್ ಮೇಲೆ ಕುಳಿತು ಕುಸಿದು ಬಿದ್ದಿದ್ದಾಳೆ. ಬಾಲಕಿಗೆ ಉಸಿರಾಟದ ತೊಂದರೆ ಇದೆ ಎಂದು ಶಾಲೆಯ ಪ್ರಾಂಶುಪಾಲೆ(Principal) ಶರ್ಮಿಷ್ಠ ಸಿನ್ಹಾ  ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ವಿದ್ಯಾರ್ಥಿಗೆ ಹೃದಯಾಘಾತ(Heart Attack) ಸಂಭವಿಸಿದೆ ಎಂದು ತಿಳಿದು ಬಂದಿದೆ. ಇನ್ನೂ ಮೃತ ವಿದ್ಯಾರ್ಥಿನಿಯ ಪೋಷಕರು ಮುಂಬೈನಲ್ಲಿ(Mumbai) ವಾಸಿಸುತ್ತಿದ್ದರು. ಆದರೆ ವಿದ್ಯಾರ್ಥಿನಿ ಅಹಮದಾಬಾದ್‌ನಲ್ಲಿ (Ahamadabad) ತನ್ನ ಅಜ್ಜಿಯರೊಂದಿಗೆ ಇದ್ದಳು.

ಇದನ್ನು ಓದಿ : ಶಾಸಕ ಸತೀಶ ಸೈಲ್ ಅವರಿಂದ ಪೊಲೀಸ್ ಇಲಾಖೆಗೆ ಎರಡು ವಾಹನ ಹಸ್ತಾಂತರ.

ನಾಡದೋಣಿ ತಂದು ಪ್ರತಿಭಟಿಸಿದ ಸಾಂಪ್ರದಾಯಿಕ ಮೀನುಗಾರರು.

ಆಶಾ ಕಾರ್ಯಕರ್ತರ ಗೌರವಧನ ಹತ್ತು ಸಾವಿರ ಹೆಚ್ಚಿಸಲು ಸಿಎಂ ಸೂಚನೆ.

ಹೆಗಲಿನಲ್ಲಿ ಬಂದೂಕು. ನಕ್ಸಲ್ ಕರಿನೆರಳಲ್ಲಿ ಅರಳಿದ ಲವ್ ಕಹಾನಿ.

ಉದ್ಯಮಿ ಕಿಡ್ನಾಪ್. ಹಲ್ಲೆ ಮಾಡಿ ಬೇರೊಂದು ಕಡೆ ಬಿಟ್ಟು ಓಡಿದ ಕಿಡ್ನಾಪರ್ಸ್.