ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ನವರಾತ್ರಿ ಹಬ್ಬದ(Navaratri Festival) ಶುಭಾಶಯಗಳೊಂದಿಗೆ  ದೇಶದ ಪ್ರತಿಯೊಬ್ಬರಿಗೆ ಸಿಹಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ(PM Modi) ತಮ್ಮ‌ ವಿಶೇಷ ಭಾಷಣದಲ್ಲಿ ತಿಳಿಸಿದ್ದಾರೆ.

ಭಾನುವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,  ದೇಶದ ಜನರು ಸ್ವದೇಶಿ(Swadeshi) ವಸ್ತುಗಳನ್ನು ಖರೀದಿಸಿ ಆತ್ಮನಿರ್ಭರ ಭಾರತವನ್ನು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.

ಸ್ವದೇಶಿ ಚಳುವಳಿಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವದೇಶಿ ಮಂತ್ರದಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಹೆಮ್ಮೆಯಿಂದ ಖರೀದಿಸಬೇಕು. ಪ್ರತಿ ಮನೆಯನ್ನೂ ಸ್ವದೇಶಿ ಪ್ರತೀಕ ಮಾಡಬೇಕು. ಪ್ರತಿ ಅಂಗಡಿಯನ್ನು ಸ್ವದೇಶಿ ವಸ್ತುಗಳಿಂದ ಅಲಂಕರಿಸಬೇಕು ಎಂದ ಮೋದಿ ರಾಜ್ಯಗಳು ಸ್ವದೇಶಿ ವಸ್ತುಗಳ ಉತ್ಪಾದನೆಗೆ ವೇಗ ನೀಡಬೇಕು. ಹೂಡಿಕೆ ವಾತಾವರಣ ಸೃಷ್ಟಿಸಬೇಕು. ಇದರಿಂದ ಪ್ರತಿಯೊಂದು ರಾಜ್ಯ ಹಾಗೂ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.

ನಾಳೆಯಿಂದ ಜಾರಿಯಾಗುವ ಜಿಎಸ್‌ಟಿ(GST) ವಿಷಯ ಪ್ರಸ್ತಾಪಿಸಿದರು.  ನವರಾತ್ರಿಯೊಂದಿಗೆ ಭಾರತ ಆತ್ಮನಿರ್ಭರತೆಯೊಂದಿಗೆ   ಸಾಗುತ್ತಿದೆ. ನಾಳೆಯಿಂದ ಮುಂದಿನ ಪೀಳಿಗೆಯ ಜಿಎಸ್‌ಟಿ(GST) ಪರಿಷ್ಕರಣೆ ಜಾರಿಯಾಗುತ್ತಿದೆ. ನವರಾತ್ರಿಯಿಂದ ಹೊಸ ಜಿಎಸ್‌ಟಿ ನೀತಿ ಜಾರಿಯಾಗುತ್ತಿದೆ. ಹೊಸ ನೀತಿಯಿಂದ ನಿಮ್ಮ ಆರ್ಥಿಕತೆ ಸಶಕ್ತವಾಗಲಿದೆ. ವಸ್ತುಗಳನ್ನು ಖರೀದಿಸುವ ಸಾಮರ್ಥ್ಯ ಹೆಚ್ಚಾಗಲಿದೆ. ಬಡವರು, ಮಧ್ಯಮವರ್ಗ, ವ್ಯಾಪಾರಿ, ಮಹಿಳೆಯರು, ಉದ್ಯಮಗಳು ಸೇರಿದಂತೆ ಎಲ್ಲರಿಗೂ ಜಿಎಸ್‌ಟಿ ಕಡಿತ ಸಿಹಿಯನ್ನು ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಜಿಎಸ್ಟಿ ಪರಿಷ್ಕರಣೆ ಭಾರತದ ಬೆಳವಣಿಗೆ ವೇಗವನ್ನು ಮತ್ತಷ್ಟು ಹೆಚ್ಚಲಿದೆ. ಭಾರತದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲಿದೆ. ಪ್ರತಿ ರಾಜ್ಯವನ್ನೂ ಸಬಲೀಕರಣ ಮಾಡಲಿದೆ. ನಮ್ಮ ದೇಶದ ಪ್ರತಿಯೊಬ್ಬರಿಗೂ ಈ ಜಿಎಸ್‌ಟಿ ಲಾಭ ಸಿಗಲಿದೆ. ಪ್ರತಿಯೊಬ್ಬರು ಹಲವು ತೆರಿಗೆ ನೀಡುತ್ತಾ ಹೈರಾಣಾಗಿದ್ದರು. ಎಲ್ಲಾ ತೆರಿಗೆಯಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಪಾರ ವಹಿವಾಟು ಮಾಡಲು ತೀವ್ರ ಪರದಾಡಬೇಕಾಗಿತ್ತು. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆ ಇತ್ತು. ಈಗ ಹಲವು ವಸ್ತುಗಳ ಜಿಎಸ್‌ಟಿ ಶೂನ್ಯವಾಗುತ್ತಿದೆ. ಹಲವು ವಸ್ತುಗಳ ತೆರಿಗೆ ಶೇಕಡಾ 5ಕ್ಕೆ ಇಳಿಕೆಯಾಗುತ್ತಿದೆ. ಇದರಿಂದ ಪ್ರತಿಯೊಬ್ಬರಿಗೆ ಲಾಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿದ್ದಾರೆ.

ಇದನ್ನು ಓದಿ : ರೀಲ್ಸ್ ಅಂತಾ ರಿಯಲ್‌ ಮದುವೆಯಾದ ಯುಟ್ಯೂಬರ್. ಮತ್ತೊಂದು ದೂರು.

ಕಾರವಾರ ಸಮೀಪವೇ ಓಡಾಡುತ್ತಿದೆ ಚಿರತೆ. ಬಿಣಗಾ ನಾಗರಿಕರ ಆತಂಕ.

ಯುಟ್ಯೂಬರ್ ಮುಕಳೆಪ್ಪ ವಿರುದ್ದ ಭಜರಂಗ ದಳ ದೂರು. ಲವ್ ಜಿಹಾದ್ ಆರೋಪ.