ಇ ಸಮಾಚಾರ ಡಿಜಿಟಲ್ವಾ ನ್ಯೂಸ್ (esamachara digital news)(Goa):  ತಮ್ಮ ರಾಜ್ಯದಲ್ಲಿ ಇತ್ತೀಚಿಗೆ ಅಧಿಕಾವಾಗುತ್ತಿರುವ ಅಪರಾಧಗಳ ನಿಯಂತ್ರಣಕ್ಕೆ ಗೋವಾ ಸರ್ಕಾರ(Goa Government) ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಇನ್ಮುಂದೆ ದಾಖಲೆಯಿಲ್ಲದೆಯೇ ಬಾಡಿಗೆ ಮನೆಯಲ್ಲಿ(Rented House) ವಾಸಿಸುವವರಿಗೆ  ದಂಡ ವಿಧಿಸುತ್ತಿದೆ.  ದಕ್ಷಿಣ ಗೋವಾದ(South Goa) ನಾಗರಿಕರು ಬಾಡಿಗೆದಾರರ ವಿವರವನ್ನು ಪೊಲೀಸ್ ಠಾಣೆಗೆ ದಾಖಲೆಗಳ ಸಮೇತ ನೀಡಬೇಕೆಂದು ಸೂಚಿಸಲಾಗಿದೆ. ಮಾಹಿತಿ ನೀಡದ ಹೊರತು ಯಾರು ಕೂಡ ಮನೆ ಬಾಡಿಗೆ ನೀಡಬಾರದು ಎಂದು  ದಕ್ಷಿಣ ಗೋವಾ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಭಾರತೀಯ ನಾಗರಿಕ ಸಂರಕ್ಷಣಾ ಸಂಹಿತೆಯ ಸೆಕ್ಷನ್ 163 ರ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಆದೇಶವನ್ನು ಪಾಲಿಸದಿದ್ದರೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 233 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ರಾಜ್ಯದಲ್ಲಿರುವ ಎಲ್ಲರಿಗೂ ನೋಟಿಸ್ ನೀಡಲು ಸಾಧ್ಯವಾಗದೆ ಇರುವುದರಿಂದ ದಕ್ಷಿಣ ಗೋವಾ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಕೆಲ ದಿನಗಳ ಹಿಂದೆ ಬಾಡಿಗೆದಾರರ ಗುರುತಿನ ಚೀಟಿಯೊಂದಿಗೆ ಮಾಹಿತಿ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಬಾಡಿಗೆದಾರರ ಮಾಹಿತಿ ನೀಡದಿದ್ದಲ್ಲಿ ಹತ್ತು ಸಾವಿರ ರೂ. ವರೆಗೆ ದಂಡ ವಿಧಿಸಲಾಗುವುದು. ಹೀಗಾಗಿ ಡಿಸೆಂಬ‌ರ್ 1 ರಿಂದ ದಂಡ ವಿಧಿಸುವ ಪ್ರಕ್ರಿಯೆ ನಡೆದಿದೆ.

ಇದನ್ನು ಓದಿ : ಪುಷ್ಪ ಚಿತ್ರದ ನಟ ಅಲ್ಲು ಅರ್ಜುನ್ ಆರೆಸ್ಟ್

ಮಾಜಿ ಬಿಗ್ ಬಾಸ್ ​ ಸ್ಪರ್ಧಿ ಡ್ರೋನ್​ ಪ್ರತಾಪ್​ ಬಂಧನ.

ಡಿ 19 ರೊಳಗೆ ಸರ್ವೆ ಕಾರ್ಯ ನಿಲ್ಲಿಸದಿದ್ದರೆ ಯಾಂತ್ರೀಕೃತ ದೋಣಿಗಳಿಂದ ಮುತ್ತಿಗೆ