ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar):  ಪ್ರಧಾನಮಂತ್ರಿ ಮೋದಿ ಅವರ GST 2.0 ಕುರಿತು ಇಂದು ಮಾಡಿರುವ ಭಾಷಣ, ಇದು ಯಾವುದೇ ಆರ್ಥಿಕ ನೀತಿಯು ಅಲ್ಲ, ಇದು ರಾಜಕೀಯ ನಾಟಕ. ಇದು ಯುವಕರು ಮತ್ತು ಉದ್ಯೋಗಾತ್ಮಕರಿಗೆ ತೀವ್ರವಾಗಿ ಬಾಧೆ ಮಾಡುವ H-1B ವೀಸಾ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಅವರ ಯತ್ನ ಮಾತ್ರ ಎಂದು  ಕಾಂಗ್ರೆಸ್ ಸೇವಾದಳದ ಸೋಶಿಯಲ್ ಮೀಡಿಯಾ  ಮತ್ತು ಪ್ರಚಾರ ಸಮಿತಿ ರಾಷ್ಟ್ರೀಯ ಸಂಯೋಜಕ‌ ಸೂರಜ್ ಜಿ ನಾಯ್ಕ ಆರೋಪಿಸಿದ್ದಾರೆ.

ಈ ಬಾರಿ ಅವರು ₹2.5 ಲಕ್ಷ ಕೋಟಿ ಉಳಿತಾಯವಾಗುತ್ತದೆ ಎಂದು ಹೇಳುತ್ತಾರೆ. ಹಾಗಾದ್ರೆ, ಕಳೆದ 8 ವರ್ಷಗಳಲ್ಲಿ GST ಕಾರಣದಿಂದ ₹20 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಅರ್ಥವೇ? ಮೊದಲು ಆದ ನಷ್ಟಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ ಸೂರಜ್ ನಾಯ್ಕ,  ಮೋದಿ ಅವರ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಮುಂತಾದ ಯೋಜನೆಗಳಿಂದ ಮುಚ್ಚಲಾದ ಸಾವಿರಾರು ಸಣ್ಣ ವ್ಯವಹಾರಗಳಿಗೆ ಪರಿಹಾರ ನೀಡುವುದು ಯಾರು ಎಂದು ಪ್ರಶ್ನಿಸಿದ್ದಾರೆ. ಕೆಲಸ ಕಳೆದುಕೊಂಡವರು, ನಂಬಿಕೆ ಕಳೆದುಕೊಂಡವರು ಇದಕ್ಕೆ ಉತ್ತರ ಕೇಳಿದರೆ ಉತ್ತರಿಸುವವರಿಲ್ಲ.

ಇದು ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಜನರನ್ನು ಮೋಸಗೊಳಿಸುವ ಆಟ. ಜನರು ಇಂತಹ ರಾಜಕೀಯ ದಿಡ್ಡಿ ಪ್ರದರ್ಶನಗಳಿಗೆ ಮಣಿಯುವುದಿಲ್ಲ ಎಂದು ಸೂರಜ್  ನಾಯ್ಕ ಹೇಳಿದ್ದಾರೆ.

ಇದನ್ನು ಓದಿ : ಆತ್ಮ ನಿರ್ಭರತೆಯೊಂದಿಗೆ ಸಾಗುತ್ತಿರುವ ಭಾರತ. ಸ್ವದೇಶಿ ವಸ್ತು ಬಳಕೆಗೆ ಮೋದಿ ಕರೆ.

ರೀಲ್ಸ್ ಅಂತಾ ರಿಯಲ್‌ ಮದುವೆಯಾದ ಯುಟ್ಯೂಬರ್. ಮತ್ತೊಂದು ದೂರು.

ಕಾರವಾರ ಸಮೀಪವೇ ಓಡಾಡುತ್ತಿದೆ ಚಿರತೆ. ಬಿಣಗಾ ನಾಗರಿಕರ ಆತಂಕ.