ಕಾರವಾರ(KARWAR) : ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ರವಿರಾಜ ಅಂಕೋಲೆಕರ ಮತ್ತು ಉಪಾಧ್ಯಕ್ಷರಾಗಿ
ಜೆಡಿಎಸ್ ನ ಶ್ರೀಮತಿ ಪ್ರೀತಿ ಜೋಶಿ ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯ ಬಲದ ನಗರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ಸೇರಿ ಒಟ್ಟು 19 ಮತಗಳನ್ನ ರವಿರಾಜ್ ಅಂಕೋಲೆಕರ್ ಮತ್ತು ಪ್ರೀತಿ ಜೋಶಿ ಪಡೆದರು. ಬಿಜೆಪಿಯ 11, ಜೆಡಿಎಸ್ 3, ಪಕ್ಷೇತರ 3, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಂಎಲ್ಸಿ ಗಣಪತಿ ಉಳ್ವೆಕರ್ ಅವರು ತಮ್ಮ ಮತ ಚಲಾಯಿಸಿದ್ದರಿಂದ ಒಟ್ಟು 19 ಮತಗಳ ಬಲ ಸಿಕ್ಕಿತು.
ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ್ ನಾಯ್ಕ ಹಾಗೂ ಸುವಿದಾ ಅವರು 14 ಮತಗಳನ್ನ ಪಡೆದರು. ಬಿಜೆಪಿ(BJP) ಮತ್ತು ಜೆಡಿಎಸ್(JDS) ಅಧಿಕಾರ ಪಡೆಯುತ್ತಿದ್ದಂತೆ ಮೈತ್ರಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(KAGERI), ಎಂಎಲ್ಸಿ(MLC) ಗಣಪತಿ ಉಳ್ವೆಕರ್, ಮಾಜಿ ಶಾಸಕಿ ರೂಪಾಲಿ ನಾಯ್ಕ(ROOPALI NAIK), ಮಾಜಿ ಸಚಿವ ಆನಂದ್ ಅಸ್ನೋಟಿಕರ ಅಭಿನಂದನೆ ಸಲ್ಲಿಸಿದರು.