ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) : ತಾಲೂಕಿನ ಕಾನೂರು ಜಲಪಾತ(Kanooru Falls) ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಬೆಳಿಗ್ಗೆಯಿಂದ ಸತತ ಶೋಧ ಕಾರ್ಯಾಚರಣೆ ಬಳಿಕ ಮೃತ ದೇಹ ಪತ್ತೆಯಾಗಿದೆ.

ಧಾರವಾಡ ಶ್ರೀನಗರ ಮೂಲದ(Dharwad Native) ಸುಹೈಲ್ ಶೇಖ್ (21)ಮೃತ ದುರ್ದೈವಿಯಾಗಿದ್ದಾನೆ. ಹಳಿಯಾಳ ಇಂಜಿನಿಯರ್ ಕಾಲೇಜಿನ(Haliyal Engineering College) ಎಂಟು ವಿದ್ಯಾರ್ಥಿಗಳು ನಿನ್ನೆ ಮಂಗಳವಾರ ಯಲ್ಲಾಪುರಕ್ಕೆ ಬಂದಿದ್ದರು. ಎಲ್ಲರೂ ಕಾನೂರು ಜಲಪಾತ ಪ್ರವಾಸಕ್ಕೆ  ತೆರಳಿದ್ದರು. ಕೆಲ ಕಾಲ ಜಲಪಾತ ವೀಕ್ಷಿಸಿ  ಮೋಜು-ಮಸ್ತಿಯಲ್ಲಿ ತೊಡಗಿದ್ದರು.ಸಂಜೆ ಎಲ್ಲರೂ ವಾಪಸ್ ಬರುತ್ತಿರುವಾಗ  ಸುಹೈಲ್ ಶೇಖ್ ಕಾಲು ಜಾರಿ ನೀರಿಗೆ ಬಿದ್ದಿದ್ದ.

ಸ್ಥಳೀಯ ಗ್ರಾಮ ಅರಣ್ಯ ಸಮಿತಿಯವರಿಗೆ(Village Forest Comitee) ವಿಷಯ ಗೊತ್ತಾಗಿ ಅವರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಪೊಲೀಸರು(Yallapur Police) ಮತ್ತು ‌ಅಗ್ನಿಶಾಮಕ ದಳ(Fire Brigade) ಸಿಬ್ಬಂದಿಗಳು ಶೋಧ ನಡೆಸಿದ್ದರು. ಇಂದು ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ(Yallapur Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಲವ್ ಜಿಹಾದ್ ಗೆ ಖಂಡನೆ. ಯೂಟ್ಯೂಬರ್ ಖ್ವಾಜಾ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ಸ್ಪಷ್ಟನೆ

ಭಟ್ಕಳದಲ್ಲಿ ಗಾಂಜಾ ಸೇವನೆ. ಒಪ್ಪಿಕೊಂಡ ಯುವಕನ ಮೇಲೆ  ಪ್ರಕರಣ.

ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ.

ಧರ್ಮಸ್ಥಳ ಪ್ರಕರಣ.‌ಮಹೇಶ ಶೆಟ್ಟಿ ತಿಮರೋಡಿ ಅಂತೂ ಗಡಿಪಾರು.