ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಬಿಗ್ ಬಾಸ್(Big Boss) ಸ್ಪರ್ದಿಗಳು, ಆಯೋಜಕರಿಗೆ ಹಾಗೂ ಅಭಿಮಾನಿಗಳಿಗೆ ಶಾಕ್ ನೀಡುವಂತ ಘಟನೆ ನಡೆದಿದೆ.

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ(Reality Show) ಬಿಗ್ ಬಾಸ್ ಕನ್ನಡ ಸೀಜನ್ 12ಕ್ಕೆ  ಕಾರ್ಯಕ್ರಮ ಸ್ಥಗಿತಗೊಂಡಿದೆ. ಬಿಗ್ ಬಾಸ್(Big Boss) ಶೋ ನಡೆಯುತ್ತಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋಗೆ(Hollywood Studios) ಅಧಿಕಾರಿಗಳು ಬೀಗ ಹಾಕಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದ 35 ಎಕರೆಯಲ್ಲಿದ್ದ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಶೋ ಕಾರ್ಯಕ್ರಮ ನಡೆಯುತ್ತಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ(Pollution Control Board) ನಿಯಮ ಹಾಗೂ ಪರಿಸರ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ  ಜಾಲಿವುಡ್ ಸ್ಟುಡಿಯೋ(Hollywood Stidio) ಹಾಗೂ ಬಿಗ್ ಬಾಸ್(Big Boss) ಟೀಂ ಆಯೋಜಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಒಂದು ಹಂತದಲ್ಲಿ ನೋಟಿಸ್ ನೀಡಲು ಹೋದ ಅಧಿಕಾರಿಗಳಿಂದ ನೋಟಿಸ್ ಪಡೆಯಲು ಜಾಲಿವುಡ್ ಸ್ಟುಡಿಯೋಸ್ ಹಾಗೂ ಬಿಗ್ ಬಾಸ್ ಟಿಂ ಹಿಂದೇಟು ಹಾಕಿತ್ತು ಎನ್ನಲಾಗಿದೆ.

ಅಲ್ಲದೇ   ಶೋ ನಡೆಸಲು ಕೂಡ ಜಾಲಿವುಡ್ ಸ್ಟುಡಿಯೋಸ್(Jollywood Studios) ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು, ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋ ಹಾಗೂ ಬಿಗ್ ಬಾಸ್ ಹೌಸ್ ಗೆ ತೆರಳಿ ಸ್ಟುಡಿಯೋಗೆ ಬೀಗ ಜಡಿದಿದ್ದಾರೆ. ಬಿಗ್ ಬಾಸ್ ಹೌಸ್ ನಲ್ಲಿದ್ದ ಎಲ್ಲಾ ಸ್ಪರ್ಧಿಗಳನ್ನು, ಸಿಬ್ಬಂದಿಗಳನ್ನು ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದ ಆಯೋಜಕರಿಗೂ, ಸ್ಪರ್ದಿಗಳಿಗೂ ಮತ್ತು ಅಭಿಮಾನಿಗಳಿಗೆ ಶಾಕ್ ಉಂಟಾಗಿದೆ.

ಇದನ್ನು ಓದಿ : ಕಡಲತೀರಕ್ಕೆ ಬಂದ ರಾಶಿರಾಶಿ ಮೀನುಗಳು

ಅಕ್ಟೋಬರ್ 18ರವರೆಗೆ ದಸರಾ ರಜೆ ವಿಸ್ತರಣೆ

ಕಕುವೈತ್ ದೇಶದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ