ಮುರ್ಡೇಶ್ವರ (Murdeshwar) : ವಾರದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕನ್ನಡ ಚಿತ್ರನಟ ಡಾಲಿ ಧನಂಜಯ(Actor Dalie Dhanjay) ಇವತ್ತು ಮುರ್ಡೇಶ್ವರ(Murdeshwar) ಸಮೀಪದ ನೇತ್ರಾಣಿ ದ್ವೀಪದಲ್ಲಿ (Netrani Island) ಸ್ಕ್ಯೂಬಾ ಡೈವಿಂಗ್(Scuba Diving) ಮಾಡಿದರು.
ಮುರ್ಡೇಶ್ವರದ ಅಕ್ವಾ ರೈಡ್ ಕಂಪನಿಯಿಂದ ತಮ್ಮ ಸ್ನೇಹಿತರೊಂದಿಗೆ ಮುರ್ಡೇಶ್ವರ ಕಡಲತೀರದಿಂದ (Murdeshwar Beach) ಬೋಟ್ ಮೂಲಕ ತೆರಳಿದ ನಟ ಡಾಲಿ ಅರಬ್ಬೀ ಸಮುದ್ರದ(Ocean S3a) ವಾತಾವರಣ ಕಂಡು ಖುಷಿಪಟ್ಟರು. ಬಳಿಕ ನೇತ್ರಾಣಿಯ ಸಮೀಪದ ಆಳ ಸಮುದ್ರದಲ್ಲಿ ಸ್ಕ್ಯೂಬಾ ಮಾಡಿದರು. ಅಪರೂಪದ ಮೀನುಗಳನ್ನ, ಹವಳದ ಬಂಡೆಗಳನ್ನ (Corels Rocks) ಕಂಡು ಖುಷಿ ಪಟ್ಟರು. ಸುಮಾರು 45 ನಿಮಿಷಗಳ ಕಾಲ ನೀರಿನಾಳದಲ್ಲಿ ಕಾಲ ಕಳೆದರು.
ಇನ್ನೂ ಒಂದು ತಾಸುಗಳ ಕಾಲ ನೀರಿನಲ್ಲಿ ಇರಬಹುದು. ಇನ್ನೂ ಕೆಲ ದಿನಗಳಲ್ಲಿ ಮತ್ತೆ ಬರುವುದಾಗಿ ಹೇಳಿದ್ದಾರೆ. ಇದೇ ವೇಳೆ ತಮ್ಮ ತಂಡದೊಂದಿಗೆ ಪ್ರವಾಸಿಗರ ಕಾಳಜಿ ತೆಗೆದುಕೊಂಡು ಸ್ಕ್ಯೂಬಾ ಮಾಡಿಸುತ್ತಿರುವ ಅಕ್ವಾ ರೈಡ್ ಕಂಪನಿ ಮುಖ್ಯಸ್ಥರಿಗೆ, ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದರು.
ವಿಶೇಷ ಅಂದರೆ ನಟ ಡಾಲಿ ಧನಂಜಯ್(Actor Dalie Dhanjay) ಅವರು ಕೆಲ ದಿನಗಳ ಹಿಂದೆ ವೈದ್ಯೆ ಡಾ.ಧನ್ಯತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2025ರ, ಫೆಬ್ರವರಿ 16ಕ್ಕೆ ದಾಂಪತ್ಯ ಜೀವನಕ್ಕೆ(Family Life) ಡಾಲಿ ಹಾಗೂ ಧನ್ಯತಾ ಕಾಲಿಡುತ್ತಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮದುವೆ(Marriage) ಅದ್ಧೂರಿಯಾಗಿ ನಡೆಯಲಿದೆ. ಮೊನ್ನೆಯಷ್ಟೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಲ್ಲಿಗೆ ಬಂದು ಸ್ಕ್ಯೂಬಾ ಡೈವಿಂಗ್ ಮಾಡಿ ಖುಷಿ ಪಟ್ಟು ತೆರಳಿದ್ದರು.
ಇದನ್ನು ಓದಿ : ಕಾರವಾರ ಮಾರುಕಟ್ಟೆ ಅಂಗಡಿಗಳ ಮೇಲೆ ದಾಳಿ