ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida) : ರಾಮನಗರ-ಗೋವಾ (Ramanagar to Goa) ರಾಷ್ಟ್ರೀಯ ಹೆದ್ದಾರಿಯ(NH Jalkatti) ಜಲ್ಕಟ್ಟಿ ಸಮೀಪ ಪ್ರವಾಸಿಗರ ವಾಹನವೊಂದು(Tourist Vehicle) ಪಲ್ಟಿಯಾದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಬೆಂಗಳೂರಿನಿಂದ  ಕುಟುಂಬವೊಂದು ಗೋವಾಕ್ಕೆ(Bangalore to Goa) ಪ್ರವಾಸಕ್ಕಾಗಿ ತೆರಳುತಿದ್ದಾಗ ಈ ಅವಘಡ ಸಂಭವಿಸಿದೆ. ವಾಹನ ಪಲ್ಟಿಯಾದ ಪರಿಣಾಮ ವಾಹನದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಂಗಳೂರಿನ ಪ್ರಜ್ವಲ್  (25) ಗಾಯಗೊಂಡ ಚಾಲಕ.

ವಾಹನದಲ್ಲಿ  ಒಟ್ಟು 13  ಪ್ರಯಾಣಿಕರು ಇದ್ದರು. ಅದೃಷ್ಟವಶಾತ್, ಇತರ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ  ಆಂಬ್ಯುಲೆನ್ಸ್‌ ಮೂಲಕ  ರಾಮನಗರ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸ್ಥಳಕ್ಕೆ ರಾಮನಗರ  ಪೊಲೀಸರು(Ramanagar Police) ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : ಬೇಲೇಕೇರಿ ಅಕ್ರಮ ಅದಿರು ಕೇಸ್. ಇಡಿ ಅಧಿಕಾರಿಗಳ ಮುಂದುವರಿದ ದಾಳಿ.

ಭಟ್ಕಳದಲ್ಲಿ ಭೀಕರ ಅಪಘಾತ. ಸ್ಕೂಟರ್ ಸವಾರನ ದುರ್ಮರಣ.

ಸಮುದ್ರದಲ್ಲಿ ಜೀವ ತೆಗೆಯವ ಮೀನುಗಳಿವೆ ಹುಷಾರ್.

ಮೀನು ಹಿಡಿಯುವ ವೇಳೆ ಹಾರಿದ ಮೀನು. ಮೀನುಗಾರ ಯುವಕನ ದುರಂತ ಸಾವು.