ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) : ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ(Mudubidre Alva’s Education Society) ಆಪದ್ಭಾಂಧವ ಈಶ್ವರ ಮಲ್ಪೆ(Ishwar Malpe) ಅವರನ್ನು ಅಂಬಾಸಿಡ‌ರ್(Ambasidor) ಆಗಿ ನೇಮಕ ಮಾಡಿದೆ.

ಇನ್ನೂ ಒಂದು ವರ್ಷಗಳ ಕಾಲ ಆಳ್ವಾಸ್(Alvas) ಮತ್ತು ಸುತ್ತಮುತ್ತಲಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದೆ.  ಯುವಜನರಲ್ಲಿ ಮೊಬೈಲ್‌(Mobile) ಬಳಕೆ ಬಗ್ಗೆ ತಿಳಿ ಹೇಳುವುದು, ತಮ್ಮ ಸುರಕ್ಷತೆ ಬಗ್ಗೆ, ಭವಿಷ್ಯದ ಬಗ್ಗೆ ಅದರಲ್ಲೂ ಮುಖ್ಯವಾಗಿ ನೀರಿನತ್ತ ಹೋಗಿ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಜಾಗೃತಿ(Awaraness) ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಈಶ್ವರ ಮಲ್ಪೆ(Eshwar Malpe) ಅವರನ್ನ ರಾಯಭಾರಿಯನ್ನಾಗಿ ನೇಮಿಸಲಾಗಿದೆ  ಎಂದು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ(Social work Division) ಮುಖ್ಯಸ್ಥೆ ಡಾ. ಮಧುಮಾಲ ಕೆ, ಹೇಳಿದ್ದಾರೆ.

ಮೂಡುಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆ(Mudabidre Alva’s Education Society) ಜೊತೆಗೆ ಆಸುಪಾಸಿನ ಹಲವು  ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು   ವರ್ಷದ ಕೊನೆಗೆ ಮಲ್ಪೆ ಬೀಚಿನಲ್ಲೂ(Malpe Beach) ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಲ್ಪೆ ಬೀಚ್ ನಲ್ಲಿ  ವಿವಿಧ ಜಾಗೃತಿ ಮೂಡಿಸುವ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಿದ್ದು  ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ.  ಮಕ್ಕಳು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳಬಾರದು. ಜೊತೆಗೆ ತಮ್ಮ ಭವಿಷ್ಯ ಮತ್ತು ಜೀವನದ ಬಗ್ಗೆ ಅವರಲ್ಲಿ ಜಾಗೃತಿ ಮೂಡಬೇಕು. ಕ್ಷುಲ್ಲಕ ಕಾರಣಗಳಿಗಾಗಿ ತಮ್ಮ ಭವಿಷ್ಯ ಮತ್ತು ಜೀವವನ್ನು ಕಳೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತು ಯುವ ಜನತೆಗೆ ಕಾರ್ಯಕ್ರಮದಿಂದ ಅನುಕೂಲವಾಗಲಿ ಎಂಬುದು ಇದರ ಉದ್ದೇಶ.

ಹೀಗಾಗಿ  ಈಶ್ವರ ಮಲ್ಪೆ(Ishwar Malpe) ಅವರು ಆಳ್ವಾಸ್ ನಲ್ಲಿ ಜಾಗೃತಿ ಉಪನ್ಯಾಸ ನೀಡಿದ್ದಾರೆ. ಮುಂದೆ ಸಹ ಅವರು ಅಥವಾ ಅವರ ತಂಡದ ಸದಸ್ಯರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ, ಮಾಹಿತಿ ನೀಡಿದ್ದಾರೆ.

ಮುಳುಗು ತಜ್ಞ(Diver Expert) ಈಶ್ವರ ಮಲ್ಪೆ ಈಗಾಗಲೇ ಸಾವಿರಾರು ಜೀವಗಳನ್ನ ರಕ್ಷಿಸಿದ್ದಾರೆ. ಅಸಾಧ್ಯವಾಗಿರುವ ಹಲವು ಮೃತದೇಹಗಳನ್ನ ನೀರಿನಾಳದಿಂದ ಎತ್ತಿ ತಂದಿದ್ದಾರೆ. ಅಲ್ಲದೇ ನದಿ ಸಮುದ್ರಗಳಲ್ಲಿ ಬಿದ್ದು ಹೋಗಿರುವ ಬಂಗಾರದ ವಸ್ತುಗಳನ್ನ ಪತ್ತೆ ಮಾಡಿ ಸಂಬಂಧಪಟ್ಟವರಿಗೆ ತಲುಪಿಸಿದ್ದಾರೆ. ಅವರ ಸಮಾಜ ಸೇವಾ ಕಾರ್ಯ ಗುರುತಿಸಿ ಅವರನ್ನ ರಾಯಭಾರಿಯನ್ನಾಗಿ ನೇಮಿಸಲಾಗಿದೆ.

ಇದನ್ಮು ಓದಿ : ಕಡಲ ಅಲೆಯ ಅಬ್ಬರಕ್ಕೆ ಸಮುದ್ರ ಪಾಲಾದ ಸಿನೆಮಾ ಸೆಟ್. ಜ್ಯೂ. ಎನ್‌ಟಿಆರ್ ಅವರ ಬಹುಕೋಟಿಯ ಚಿತ್ರ.

ಭಟ್ಕಳ ತಾಲೂಕಾ ಮಡಿವಾಳ ಮಾಚಿದೇವ ಸಂಘ ಅಸ್ತಿತ್ವಕ್ಕೆ

ಮಕ್ಕಳನ್ನ ಒತ್ತೆಯಾಳಾಗಿಸಿಕೊಂಡ ಭೂಪ. ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ಫಿನಿಶ್.

ಸ್ಟೇರಿಂಗ್ ತುಂಡಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್.

ಚಪಲ ಚೆನ್ನಿಗ ರಾಮಚಂದ್ರ ಎಸ್ಕೇಪ್. ಜಸ್ಟ್ ಮಿಸ್. ‌ಉಪನ್ಯಾಸಕನಿಗೆ ಕಾರು ವ್ಯವಸ್ಥೆ ಮಾಡಿಸಿದ್ದ ಇಬ್ಬರು ವಶಕ್ಕೆ.