ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಖಾನಾಪುರ(Khanapura): ವಿದ್ಯುತ್ ಶಾಕ್ ತಗುಲಿ‌ ಆನೆಗಳೆರಡು‌(Elephants) ಸಾವನ್ನಪ್ಪಿರುವ  ಘಟನೆ ರಾಮನಗರ ಖಾನಾಪುರ(Ramanagar khanapur) ಗಡಿಯಲ್ಲಿ ಸಂಭವಿಸಿದೆ.

ಭತ್ತದ ಹೊಲದಲ್ಲಿ ರವಿವಾರ ಬೆಳಿಗ್ಗೆ ಎರಡು ಆನೆಗಳು  ಧಾರುಣವಾಗಿ ಮೃತಪಟ್ಟಿವೆ. ಖಾನಾಪುರ ತಾಲ್ಲೂಕಿನ(Khanapur Taluku) ಸುಲೇಗಾಳಿ ಗ್ರಾಮದ ರೈತ ಗಣಪತಿ ಸಾತೇರಿ ತಮ್ಮ ಹೊಲದಲ್ಲಿ ಕಾಡು ಪ್ರಾಣಿಗಳಿಂದ(Wild Animals) ಬೆಳೆಗಳ ರಕ್ಷಣೆಗಾಗಿ ಸೌರ ಬೇಲಿ ಅಳವಡಿಸಿದ್ದರು. ಆದರೆ ಬೆಳಗಿನ ವೇಳೆಗೆ ಹೆಸ್ಕಾಂ(Hescom) ವಿದ್ಯುತ್ ತಂತಿ ಮುರಿದು ಬೇಲಿಗೆ ತಗುಲಿ ವಿದ್ಯುತ್ ಹರಿದಿತ್ತು‌ ಎನ್ನಲಾಗಿದೆ. ಅದೇ ವೇಳೆ  ಆಹಾರದ ಹುಡುಕಾಟದಲ್ಲಿ ಬಂದ ಎರಡು ಆನೆಗಳು ಬೇಲಿಯನ್ನು ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದಿವೆ.

ಆನೆ ಶಾಕ್(Elephant Shock) ಹೊಡೆದು ಬಿದ್ದಿರುವ ದೃಶ್ಯ ಕಂಡ ಗ್ರಾಮಸ್ಥರು(Villagers) ಬೆಚ್ಚಿಬಿದ್ದಿದ್ದರು. ಕೆಲವೇ ಹೊತ್ತಿನಲ್ಲಿ‌ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ  ನಾಗರಿಕರು ಸೇರಿದ್ದರು. ಸ್ಥಳಕ್ಕೆ  ಖಾನಾಪುರ ಅರಣ್ಯ(Khanapur Forest) ಅಧಿಕಾರಿಗಳು  ಧಾವಿಸಿ ಪರಿಶೀಲನೆ ನಡೆಸಿದರು.

ಹೆಸ್ಕಾಂ ಅಧಿಕಾರಿಗಳ ಪ್ರಕಾರ, “ವಿದ್ಯುತ್ ತಂತಿ ಮುರಿದುಹೋಗಿಲ್ಲ. ರೈತನ ಗುಡಿಸಲಿನ ಸಂಪರ್ಕದಿಂದಲೇ ವಿದ್ಯುತ್ ಶಾಕ್ ಹರಿದಿರಬಹುದು,” ಎಂದಿದ್ದರು. ಮತ್ತೊಂದೆಡೆ ಸ್ಥಳೀಯರು, “ಸೌರ ಬೇಲಿಯ ಮೇಲೆ ತಂತಿ ಬಿದ್ದಿದ್ದನ್ನು ನಾವು ಸ್ವತಃ ನೋಡಿದ್ದೇವೆ,” ಎಂದು ಹೇಳಿದ್ದರು.


ಇದರಿಂದಾಗಿ ಆನೆಗಳ ಸಾವಿನ ನಿಖರ ಕಾರಣವನ್ನ ಅಧಿಕಾರಿಗಳು ಮುಂದಾಗಿದ್ದು ಜಮೀನು ಮಾಲೀಕನ ಮನೆಯಿಂದಲೇ ವಿದ್ಯುತ್ ‌ತಂತಿ‌ ತುಂಡಾಗಿ ಬಿದ್ದಿದ್ದರಿಂದಲೇ ಆನೆಗಳು ಸಾವನ್ನಪ್ಪಿರುವುದಾಗಿ ಗೊತ್ತಾಗಿದೆ. ಸದ್ಯ ಜಮೀನು ಮಾಲೀಕ ನಾಒತ್ತೆಯಾಗಿದ್ದು. ಅರಣ್ಯ ಇಲಾಖೆ ತನಿಖೆ ಮುಂದುವರೆಸಿದೆ.

ಇದನ್ನು ಓದಿ : ಒಂದೇ ದಿನ ಇಬ್ಬರು ಮಹಿಳಾ ಜನಪ್ರತಿನಿಧಿಗಳು ಹೃದಯಾಘಾತದಿಂದ  ಸಾವು.

ಹಾಡು ಹಾಡುತ್ತಿದ್ದಾಗ ಎಎಸ್ಐ ಹೃದಯಾಘಾತದಿಂದ ನಿಧನ.