ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಕರ್ನಾಟಕದಲ್ಲಿ ಐಪಿಎಸ್ (IPS) ಅಧಿಕಾರಿಯಾಗಿ ರಾಜ್ಯದ ಜನರಿಂದ ʼಸಿಂಗಂʼ ಅಂತ ಕರೆಸಿಕೊಂಡಿದ್ದ ಕೆ. ಅಣ್ಣಾಮಲೈ(K Anna Malai) ಬಿಜೆಪಿಗೆ ಗುಡ್ ಬೈ(BJP Gudbai) ಹೇಳಲು ನಿರ್ಧರಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಅವರು ಬಿಜೆಪಿ ಪಕ್ಷದ ಹೈಕಮಾಂಡ್(BJP Highcommand) ವಿರುದ್ದ ಅಸಮಧಾನಗೊಂಡಿದ್ದಾರೆ. ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿ, ತಮಿಳುನಾಡು ರಾಜ್ಯ ಬಿಜೆಪಿ(Tamilunadu State BJP) ಅಧ್ಯಕ್ಷರಾಗಿ, ಚುನಾವಣೆಯಲ್ಲಿ ಸೋತು ಸುಣ್ಣವಾದ ನಂತರ ಇದೀಗ ಬಿಜೆಪಿಗೆ ತೊರೆಯಲಿದ್ದಾರೆಂಬ ಸುದ್ದಿ ಹರಡಿದೆ.
ಅಣ್ಣಾಮಲೈ(Anna Malai) ತಮಿಳುನಾಡಿನ ರಾಜ್ಯಾಧ್ಯಕ್ಷರಾದ(Tamilunadu President) ಮೇಲೆ ಚಕ್ರ ಕಟ್ಟಿಕೊಂಡು, ತಮಿಳುನಾಡಿನ ಎಲ್ಲಾ 234 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸಂಚರಿಸಿದ್ದರು. ಪಕ್ಷದ ಬುಡವನ್ನು ಗಟ್ಟಿ ಮಾಡುವ ಕೆಲಸವನ್ನು ಮಾಡಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಖುದ್ದು ಸ್ಪರ್ಧಿಸಿ ಡಿಎಂಕೆ(DMK) ಅಭ್ಯರ್ಥಿ ವಿರುದ್ದ ಸೋಲು ಅನುಭವಿಸಿದರು.
ಐಪಿಎಸ್ ನಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಅಧಿಕಾರಿಗಳು ರಾಜಕೀಯಕ್ಕೆ ಬಂದರೆ ಖಂಡಿತವಾಗಿಯೂ ಅಲ್ಲೊಂದು ಬದಲಾವಣೆ ಸಾಧ್ಯ ಅಂತ ನಂಬಿದ್ದ ಜನರನ್ನ ಅಣ್ಣಾಮಲೈ ನಿರಾಸೆಗೊಳಿಸಿದ್ದರು. ಬಿಜೆಪಿಗೆ ಸೇರಿದ ಮೇಲೆ ಅವರು ಬಿಜೆಪಿಗೆ(BJP) ಹೊಂದಿಕೊಂಡು ಹೋಗುವ ಕೆಲಸ ಮಾಡಿದ್ದರು.
ಅವರು ಬಿಜೆಪಿ ಸೇರಿದಾಗಲೇ ಡಿಎಂಕೆ ವಿರುದ್ಧ ತೀಕ್ಷ್ಣವಾದ ಟೀಕೆಗಳು ಅಣ್ಣಾಮಲೈಗೆ ಮುಳುವಾದಂತೆ ಕಾಣುತ್ತಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಸಂಘಟನೆ ವಿಚಾರಕ್ಕಾಗಿಯೇ ಅಣ್ಣಾಮಲೈ(Anna Malai) ಪಕ್ಷದ ಜೊತೆ ಸಂಘರ್ಷವಿದೆ ಎಂಬ ಬಗ್ಗೆ ಒಪ್ಪಿಕೊಂಡಿದ್ದು, “ಯಾರನ್ನೂ ಕೂಡ ತಲೆಗೆ ಗನ್ ಇಟ್ಟು ಪಕ್ಷದಲ್ಲಿ ಉಳಿಯಿರಿ ಎಂದು ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. “ನನಗೆ ಇಷ್ಟವಾದರೆ ನಾನು ಉಳಿಯುತ್ತೇನೆ ಅಥವಾ ಇಷ್ಟವಿಲ್ಲದಿದ್ದರೆ ನಾನು ರಾಜೀನಾಮೆ(Resign) ನೀಡಿ ಕೃಷಿ(Agriculture) ಮಾಡುವುದನ್ನು ಮುಂದುವರಿಸುತ್ತೇನೆ. ಸಮಯ ಬಂದಾಗ ನಾನು ಮಾತನಾಡುತ್ತೇನೆ. ತಲೆಯ ಮೇಲೆ ಬಂದೂಕನ್ನು ಹಿಡಿದು ಯಾರನ್ನೂ ಪಕ್ಷದಲ್ಲಿ ಉಳಿಯುವಂತೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದು ಸ್ವಯಂಪ್ರೇರಿತ ಕಾರ್ಯವಿಧಾನ. ನಾವು ನಮ್ಮ ಸ್ವಂತ ಹಣವನ್ನು ಖರ್ಚು ಮಾಡುವ ಮೂಲಕ ರಾಜಕೀಯದಲ್ಲಿದ್ದೇವೆ” ಎಂದು ಹೇಳಿದ್ದಾರೆ. ನಾನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಮಾತನಾಡುವ ಸಾಂಪ್ರದಾಯಿಕ ರಾಜಕಾರಣಿಯಲ್ಲ” ಎಂದು ಅವರು ಹೇಳಿದ್ದಾರೆ.
ಅಣ್ಣಾಮಲೈ : ತಮಿಳುನಾಡಿನ ಕೊಯಮತ್ತೂರಿನಲ್ಲಿ 1985ರಲ್ಲಿ ಜನಿಸಿದ ಅಣ್ಣಾಮಲೈ(Anna Malai) ಅವರು, ಐಐಟಿ ಕಾಂಪಿಲ್ನಿಂದ ಎಂಜಿನಿಯರಿಂಗ್(Engineering) ಪದವಿ ಪಡೆದ ನಂತರ, ಐಐಎಂ ಅಹಮದಾಬಾದ್ನಲ್ಲಿ(Ahamadabad) ಎಂಬಿಎ ಮಾಡಿದರು. ಆದರೆ, ಅವರ ಜೀವನದ ಮುಖ್ಯ ತಿರುವು ಬಂದದ್ದು 2006ರಲ್ಲಿ. ಐಪಿಎಸ್ ಪರೀಕ್ಷೆಯಲ್ಲಿ(IPS Exam) 23ನೇ ರ್ಯಾಂಕ್ ಪಡೆದು ತಮಿಳುನಾಡು ಕೇಡರ್ಗೆ ಸೇರಿದರು. 2011ರಲ್ಲಿ ಐಪಿಎಸ್ ಹುದ್ದೆಗೆ ಆಯ್ಕೆಯಾದ ಅಣ್ಣಾಮಲೈ, 2013ರಲ್ಲಿ ಉಡುಪಿ(Udupi) ಜಿಲ್ಲೆಯ ಕಾರ್ಕಳದಲ್ಲಿ ಉಪ ವಿಭಾಗ(Karkal Subdivision) ಸಹಾಯಕ ಪೊಲೀಸ್ ಅಧೀಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. 2015ರ ಜನವರಿ 1 ರಂದು ಪೊಲೀಸ್ ವರಿಷ್ಠಾಧಿಕಾರಿಯಾಗಿ(SP) ಬಡ್ತಿ ಪಡೆದ ಅಣ್ಣಾಮಲೈ, 2016ರವರೆಗೆ ಉಡುಪಿ ಜಿಲ್ಲಾ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ಚಿಕ್ಕಮಗಳೂರು (Chikamanglore) ಜಿಲ್ಲೆಯಲ್ಲಿ 2018ರ ಅಕ್ಟೋಬರ್ವರೆಗೆ ಎಸ್ಪಿಯಾಗಿ ಕಾರ್ಯ ನಿರ್ವಹಿಸಿ, ಆ ಬಳಿಕ ಬೆಂಗಳೂರು ದಕ್ಷಿಣ ಪೊಲೀಸ್ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
2011ರಲ್ಲಿ ಚೆನ್ನೈನಲ್ಲಿ(Chennai) ನಡೆದ ಸರ್ಕಾರಿ ಭೂಮಿ ಮಾರಾಟದ ವಂಚನೆಯನ್ನು ಬಹಿರಂಗಪಡಿಸಿ, ಅವರು ಡಿಎಂಕೆ ಸರ್ಕಾರದ ವಿರುದ್ಧ ನಿಂತರು. ಬೆಂಗಳೂರು ರಾಷ್ಟ್ರೀಯ ಆರ್ಥಿಕ ಅಪರಾಧಗಳ ವಿಭಾಗದಲ್ಲಿ (EOW) ಕೆಲಸ ಮಾಡಿ, ಹಲವು ಹೈಪ್ರೊಫೈಲ್ ಕೇಸ್ಗಳನ್ನು ಕೈಗೆತ್ತಿಕೊಂಡಿದ್ದರು.
ಅಣ್ಣಾ ಮಲೈ ಅವರ ಧೈರ್ಯ, ಸಾಮರ್ಥ್ಯವನ್ನು ಕಂಡು ಕರ್ನಾಟಕದಲ್ಲಿ ‘ಸಿಂಗಂ’ ಎಂದು ಜನ ಕರೆಯುತ್ತಿದ್ದರು. 2019ರಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. 2021ರ ಜುಲೈನಲ್ಲಿ, ಬಿಜೆಪಿಯಲ್ಲಿ ಸೇರಿದ ಅವರು ತಕ್ಷಣ ತಮಿಳುನಾಡು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡರು.
ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು, ತಮಿಳುನಾಡಿನ ಎಲ್ಲಾ 234 ಅಸೆಂಬ್ಲಿ ಕ್ಷೇತ್ರಗಳಲ್ಲಿ ಓಡಾಡಿದ್ದರು. ಪಕ್ಷದ ಬೇಸ್ ಅನ್ನು ಬಲಪಡಿಸುವ ಕೆಲಸವನ್ನು ಮಾಡಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಖುದ್ದು ಸ್ಪರ್ಧಿಸಿದರೂ, ಡಿಎಂಕೆ ಅಭ್ಯರ್ಥಿ ವಿರುದ್ದ ಸೋಲು ಅನುಭವಿಸಿದರು. ಆ ಚುನಾವಣೆಯಲ್ಲಿ, ಎನ್ಡಿಎ ಮೈತ್ರಿಕೂಟದ ಭಾಗವಾಗಿ AIADMK ಜೊತೆ ಸೇರಿಕೊಂಡು, ಬಿಜೆಪಿ ಇಪ್ಪತ್ತು ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. ಅಣ್ಣಾಮಲೈ, ಚುನಾವಣೆಯಲ್ಲಿ ಸೋತಿದ್ದರೂ, ಸಕ್ರಿಯ ರಾಜಕಾರಣಕ್ಕೆ ಇಳಿದ ಒಂದೇ ವರ್ಷದಲ್ಲಿ ಪಡೆದ ಮತ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
ಇದೀಗ ಅಣ್ಣಾ ಮಲೈ ಬಿಜೆಪಿಗೆ ಗುಡ್ ಬೈ ಹೇಳುತ್ತಾರೆಂಬ ಸುದ್ದಿಯಾಗುತ್ತಿದೆ. ಅವರು ಹೊಸ ಪಕ್ಷ ಕಟ್ಟುತ್ತಾರೆಂದು ಹೇಳಲಾಗುತ್ತಿದೆ. ಆದರೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕಾಗಿದೆ.
ಇದನ್ನು ಓದಿ : ಶಾಸಕ ಸತೀಶ್ ಸೈಲ್ ಜಾಮೀನು ರದ್ದು. ಮತ್ತೆ ಜೈಲು ಸೇರುವ ಸಾಧ್ಯತೆ.
ಲಿಪ್ಟ್ ಕೆಳಕ್ಕೆ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು. ಮುರ್ಡೇಶ್ವರದ ಕಾಮತ್ ಯಾತ್ರಿ ನಿವಾಸದಲ್ಲಿ ಘಟನೆ.
ಮುರ್ಡೇಶ್ವರ ಮತ್ತು ಭಟ್ಕಳ ಗ್ರಾಮೀಣ ಪೊಲೀಸರ ಕಾರ್ಯಾಚರಣೆ. ಮೂವರ ಮೇಲೆ ಪ್ರಕರಣ.
ಕರ್ತವ್ಯದಲ್ಲಿರುವಾಗ ಬಿಸಿಯೂಟದ ಕೋಣೆಯಲ್ಲಿ ಕುಸಿದು ಬಿದ್ದ ಮಹಿಳೆ ಸಾವು
ದಾರಿ ಸಿಗದೇ ಕಾಡಲ್ಲಿ ನಾಲ್ಕು ದಿನ ಕಳೆದ ವೃದ್ದ ವೈದ್ಯ. ಪತ್ತೆ ಹಚ್ಚಿದ ಪೊಲೀಸ್ ಶ್ವಾನ.

