ಕಾರವಾರ : ತಾಲೂಕಿನ ಅರಗಾ, ಚೆಂಡಿಯಾ, ಬಿಣಗಾ ಭಾಗದಲ್ಲಿ ಉಂಟಾಗುತ್ತಿರುವ ಕೃತಕ ನೆರೆ ತಪ್ಪಿಸಲು ಶಾಸಕ ಸತೀಶ್ ಸೈಲ್ ಪ್ರಯತ್ನಿಸುತ್ತಿದ್ದಾರೆ.
ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಅವರೊಂದಿಗೆ ಇಂದು ನೌಕಾನೆಲೆ ಪ್ರದೇಶದಲ್ಲಿ ತೆರಳಿ ನೀರಿಗೆ ತಡೆ ಒಡ್ದುತ್ತಿರುವ ಸ್ಥಳ ಪರಿಶೀಲನೆ ನಡೆಸಿದರು. ಮಳೆ ನೀರು ಸಮುದ್ರ ಸೇರುವ ಜಾಗ ಕಿರಿದಾಗಿದ್ದರಿಂದ ನೆರೆ ಸೃಷ್ಟಿಯಾಗುತ್ತಿದೆ ಎಂದು ಸಚಿವರಿಗೆ ತಿಳಿಸಿದರು. ಅಲ್ಲದೇ ನೌಕನೆಲೆ ಅಧಿಕಾರಿಗಳಿಗೆ ಮನವಿ ಮಾಡಿದರು. ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿ ಎಂದು ಭಿನ್ನವಿಸಿಕೊಂಡರು
ಅರಗಾ, ಚೆಂಡಿಯಾ, ಬಿಣಗಾ ಭಾಗದಲ್ಲಿ ಉಂಟಾಗುತ್ತಿರುವ ನೆರೆ ಪರಿಸ್ಥಿತಿ ಇನ್ಮುಂದೆ ಆಗಬಾರದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಚಿವ ಮಾಂಕಾಳ್ ವೈದ್ಯ ಸೂಚಿಸಿದರು.