ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋಕರ್ಣ(Gokarn) : ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆಯೊಬ್ಬಳು(Foreign Women) ಕಡಲ ಅಲೆಗೆ ಸಿಲುಕಿದ ಘಟನೆ ಗೋಕರ್ಣದ ಕುಡ್ಲೆ ಕಡಲ ತೀರದಲ್ಲಿ(Gokarn Kudle Beach) ನಡೆದಿದೆ.
ಕಜಕಿಸ್ತಾನ ಮೂಲದ(Khajakistan Native) ಐದಾಲಿ (25) ಎಂಬಾಕೆಯನ್ನ ಜೀವ ರಕ್ಷಕ ಸಿಬ್ಬಂದಿಗಳು ರಕ್ಚಣೆ ಮಾಡಿದ್ದಾರೆ. ಇಂದು ಬೆಳಿಗ್ಗೆ ತನ್ನ ಪತಿಯ ಜೊತೆಗೆ ಗೋಕರ್ಣಕ್ಕೆ ಪ್ರವಾಸಕ್ಕೆ(Gokarn Tour) ಬಂದಿದ್ದರು. ಕುಡ್ಲೆ ಕಡಲ ತೀರದಲ್ಲಿ ಈಜುತ್ತಿದ್ದ ವೇಳೆ ಅಲೆಯ ಹೊಡೆತಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿದ್ದಾರೆ. ಅಪಾಯಕ್ಕೆ ಸಿಲುಕಿರುವುದನ್ನ ಗಮನಿಸಿದ ತೀರದಲ್ಲಿದ್ದ ಜೀವರಕ್ಷಕರು ತಕ್ಷಣ ನೀರಿಗೆ ಇಳಿದು ರಕ್ಷಣಾ ಕಾರ್ಯ(Rescue Operation) ನಡೆಸಿದರು. ಅಲ್ಲದೇ ಮಹಿಳೆಯನ್ನು ಸುರಕ್ಷಿತವಾಗಿ ತೀರಕ್ಕೆ ಕರೆ ತಂದಿದ್ದಾರೆ.
.
ಕಾರ್ಯಾಚರಣೆಯಲ್ಲಿ ಮಂಜುನಾಥ ಹರಿಕಂತ್ರ, ಗಿರೀಶ ಗೌಡ, ನಾಗೇಂದ್ರ ಕುರ್ಲೆ ಹಾಗೂ ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ ತಂಡದ ಲಕ್ಷ್ಮಿಕಾಂತ ಹರಿಕಂತ್ರ ಸೇರಿ ಹಲವು ಮಂದಿ ಪಾಲ್ಗೊಂಡರು. ಟೂರಿಸ್ಟ್ ಮಿತ್ರ ಶೇಖರ್ ಹರಿಕಂತ ನೆರವಿಗೆ ಧಾವಿಸಿ ಕಾರ್ಯಾಚರಣೆಗೆ ಸಹಕರಿಸಿದರು.
ವಿದೇಶಿ ಮಹಿಳೆ ಜೀವ ರಕ್ಷಿಸಿದ ಜೀವ ರಕ್ಷಕ ಸಿಬ್ಬಂದಿಯ ಚುರುಕಿನ ಕಾರ್ಯಾಚರಣೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನು ಓದಿ : ಭಟ್ಕಳ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ. ಗೋ ಕಳ್ಳತನ ಮಾಡಿದ್ದ ಇಬ್ಬರ ಆರೆಸ್ಟ್.
ಭಟ್ಕಳದಲ್ಲಿ ರಾಜಾರೋಷವಾಗಿ ಗೋ ಕಳ್ಳತನ. ದೇವಾಲಯದ ಪಕ್ಕದಲ್ಲೇ ಮತ್ತೆ ಕಳ್ಳರ ಅಟ್ಟಹಾಸ.
ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 29 ಪ್ರಯಾಣಿಕರಿಗೆ ಗಾಯ
ಮಲ್ಪೆ ಮೀನುಗಾರಿಕೆ ಬೋಟ್ ಗೋವಾದಲ್ಲಿ ವಶಕ್ಕೆ . ಕಠಿಣ ಕ್ರಮ ಕೈಗೊಳ್ಳಲು ಮುಂದಾದ ಅಧಿಕಾರಿಗಳು.
