ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದಲ್ಲಿ(Karki Village)  ಹಿಟಾಚಿ ಯಂತ್ರಕ್ಕೆ(Hitachi Machine) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ(National Highway) ಪಕ್ಕದಲ್ಲಿರುವ ಬಾಣೇಶ್ವರ ಟೈಲ್ಸ್ ಅಂಗಡಿಯ ಸಮೀಪ ಈ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯಂತ್ರದ ಬ್ಯಾಟರಿ ಆಕಸ್ಮಿಕವಾಗಿ ಸ್ಫೋಟಗೊಂಡಿದ್ದು, ಅದರಿಂದಲೇ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಬೆಂಕಿ ತೀವ್ರಗೊಂಡ ಪರಿಣಾಮ ಹಿಟಾಚಿ ವಾಹನ(Hitachi Vehicle) ಸುಟ್ಟು ಭಸ್ಮವಾಗಿದೆ.

ಘಟನಾ ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗಳು(Fire Brigade) ಧಾವಿಸಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಯಂತ್ರ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಇದನ್ನು ಓದಿ : ಸಿಎಂ ಅವರೇ ಆಸ್ಪತ್ರೆ ಉದ್ಘಾಟಿಸೋ ಮುನ್ನ ಎಚ್ಚರ : ರೂಪಾಲಿ ನಾಯ್ಕ ಆಕ್ರೋಶ.

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ. ನೌಕಾ ಸಿಬ್ಬಂದಿಗಳಿಂದ ಆಕರ್ಷಕ ಬೀಟಿಂಗ್ ರಿಟ್ರೀಟ್.

ಶಾಲೆಗೆ ಕಳಪೆ ತೊಗರಿಬೇಳೆ ಪೂರೈಕೆ. ಆಕ್ರೋಶಗೊಂಡ ಎಸ್ಡಿಎಂಸಿ, ಪಾಲಕರು.