ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮುರ್ಡೇಶ್ವರ (Murdeshwar) : ಇಲ್ಲಿನ ಪ್ರಖ್ಯಾತ ಸ್ಕೂಬಾ ಡೈವಿಂಗ್ ಸಂಸ್ಥೆ ನೇತ್ರಾಣಿ ಅಡ್ವೆಂಚರ್ಸ್ ನ ಅಧಿಕೃತ ಗೂಗಲ್ ವ್ಯವಹಾರಿಕ (Google Business) ಖಾತೆಯನ್ನು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಹ್ಯಾಕ್(Hacked) ಮಾಡಿದ್ದಾರೆ. ವ್ಯವಹಾರದ ವಿವರಗಳನ್ನು ತಿರುಚಿ, ನಕಲಿ ಸಂಪರ್ಕ ಸಂಖ್ಯೆಯನ್ನು(Duplicate Contact Numbers) ಸೇರಿಸಿ, ಗ್ರಾಹಕರಿಂದ ವಂಚನೆಯ ಮೂಲಕ ಹಣ ಸಂಗ್ರಹಿಸುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಸಂಸ್ಥೆಯ ಮ್ಯಾನೇಜರ್ ದಿನಾಂಕ 29-11-2025 ರಂದು ಸೈಬರ್ ಕ್ರೈಂ ವಿಭಾಗಕ್ಕೆ(Cumber Crime Division) ಅಧಿಕೃತ ದೂರನ್ನು ಸಲ್ಲಿಸಿದ್ದು, ಅದರ ಆಧಾರದ ಮೇಲೆ ತನಿಖೆ ಪ್ರಾರಂಭಗೊಂಡಿರುವುದಾಗಿ ಗೊತ್ತಾಗಿದೆ.
ದೂರಿನ ಪ್ರಕಾರ, ಹ್ಯಾಕರ್ ಸಂಸ್ಥೆಯ ಗೂಗಲ್ ಪ್ರೊಫೈಲ್(Google Profile) ಅನ್ನು ಸ್ವಾಧೀನಕ್ಕೆ ತೆಗೆದುಕೊಂಡು, ಅದರಲ್ಲಿ ತನ್ನ ವಾಟ್ಸಾಪ್ ಸಂಖ್ಯೆ 7090059002 ಸೇರಿಸಿ, ನೇತ್ರಾಣಿ ಅಡ್ವೆಂಚರ್ಸ್(Netrani Adventure’s) ಮೂಲಕ ಡೈವಿಂಗ್ ಬುಕ್ಕಿಂಗ್ ಮಾಡಿಕೊಳ್ಳುವ ಗ್ರಾಹಕರಿಗೆ ನೇರ ಸಂಪರ್ಕ ಸಾಧಿಸಲು ಪ್ರಯತ್ನಿಸಿದೆ. ನಂತರ ಗ್ರಾಹಕರಿಂದ ನಂಬಿಕೆ ಗಳಿಸಿ ಹಣ ಪಡೆದಿದ್ದಾರೆ ಎನ್ನಲಾಗಿದೆ.
ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ಮಾಲೀಕರಾದ ಗಣೇಶ್ ಹರಿಕಾಂತ್ ಅವರು ಈ ಘಟನೆಯನ್ನು “ವ್ಯವಹಾರಿಕ ಮೋಸದ ಗಂಭೀರ ಉದಾಹರಣೆ” ಎಂದು ವಿವರಿಸಿ, ಪ್ರವಾಸಿಗರು ಹಾಗೂ ಗ್ರಾಹಕರು ಯಾವುದೇ ರೀತಿಯ ಪಾವತಿ ಮಾಡುವ ಮೊದಲು ಅಧಿಕೃತ ಸಂಖ್ಯೆಗಳನ್ನೇ ಪರಿಶೀಲಿಸುವಂತೆ ವಿನಂತಿ ಮಾಡಿದ್ದಾರೆ.
ಬುಕ್ಕಿಂಗ್ ವೇಳೆ ಗ್ರಾಹಕರು ಕೇವಲ ತಮ್ಮ ಅಧಿಕೃತ ವೆಬ್ಸೈಟ್ www.netraniadventurs.com ಮತ್ತು ಮೊಬೈಲ್ ಸಂಖ್ಯೆ 9900431111 ಮಾತ್ರ ಬಳಸುವಂತೆ ಸಂಸ್ಥೆಯವರು ವಿನಂತಿಸಿದ್ದಾರೆ. ಸಂಶಯಾಸ್ಪದ ಸಂಖ್ಯೆ ಅಥವಾ ಲಿಂಕ್ ಮೂಲಕ ಪಾವತಿ ಬೇಡಿಕೆಯಿದ್ದಲ್ಲಿ ತಕ್ಷಣ ಸೈಬರ್ ಕ್ರೈಂ ಇಲಾಖೆಗೆ(Cyber Crime Department) ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿ : ಗೋವಾಕ್ಕೆ ಮತ್ತೊಂದು ಆಘಾತ. ಪಣಜಿಯಲ್ಲಿ ಮಹೋತ್ಸವದ ಟೆಂಟ್ ಗೆ ಬೆಂಕಿ.
ಗೋವಾ ದುರಂತ. ಕೂದಲೆಳೆಯಲ್ಲಿ ಪಾರಾದ ನರ್ತಕಿ. ಮಾಲೀಕನಿಗೆ ಶೋಧ.
ಜಿಂಕೆ ಚರ್ಮ–ಕಾಡುಹಂದಿ ಮಾಂಸ ಸಾಗಾಟ. ಅರಣ್ಯ ಇಲಾಖೆ ದಾಳಿ. ಐವರು ಆರೆಸ್ಟ್.
