ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಮಹಿಳೆಯ ಮಾನ ಭಂಗ ಮಾಡಿ ಜೀವ ಬೆದರಿಕೆ ಹಾಕಿದ ಆರೋಪಿಗೆ ಶಿರಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಪೀಠಾಸೀನ ಶಿಕ್ಷೆ ವಿಧಿಸಿದೆ.
ಶಿರಸಿ ನ್ಯಾಯಧೀಶರಾದ ಕಿರಣ ಕಿಣಿ ಅವರು ಪ್ರಕರಣದಲ್ಲಿ ಆದೇಶಿಸಿದ್ದಾರೆ. ಉಲ್ಲಾಸ ಗಾವಡಾ ಎಂಬಾತನಿಗೆ 10 ವರ್ಷ ಸಾದಾ ಕಾರಾಗೃಹ ಶಿಕ್ಷೆ,15 ಸಾವಿರ ರೂ ದಂಡ ಹಾಗು ಸಂತ್ರಸ್ತೆಗೆ 10 ಸಾವಿರ ರೂ ಪರಿಹಾರ ನೀಡಲು ಮಹತ್ವದ ಆದೇಶ ನೀಡಿದೆ.
ಪ್ರಕರಣವನ್ನು ಕೈಗೆತ್ತಿಕೊಂಡು ಸಮರ್ಥವಾಗಿ ವಾದ ಮಂಡಿಸಿದ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ ಎಂ ಮಳಗಿಕರ್ ಆರೋಪಿ ಉಲ್ಲಾಸ ಸಡಕೋ ಗಾವಡಾ ಈತನಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 11-12-2018 ರಂದು ಮಹಿಳೆಯು ತನ್ನ ಮನೆಯ ದನವನ್ನು ಮೇಯಿಸಲು ಜೋಯಿಡಾ ತಾಲೂಕಿನ ಅಣಶಿ ಗ್ರಾಮದ ಕೈಲವಾಡ ಮಜಿರೆಯ ಅರಣ್ಯ ಪ್ರದೇಶದಲ್ಲಿ ಒಬ್ಬಂಟಿಯಾಗಿ ಹೋಗಿದ್ದಾಗ ಆರೋಪಿ ಬಲತ್ಕಾರ ಮಾಡಿ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ಜೊಯಿಡಾ ಠಾಣೆಯ ಸಿಪಿಆಯ್ ರಮೇಶ ಹೂಗಾರ ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದಲ್ಲಿ ವಾದ ಆಲಿಸಿದ ಆರೋಪಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಪ್ರಕರಣದಲ್ಲಿ ಪೋಲಿಸ್ ಕಾನ್ಸಟೆಬಲ್ ಲಿಯಾಕತ್ ಅಲಿ ಹಾಗು ಖಲೀಲ್ ಮುಲ್ಲಾ ಸಾಕ್ಷಿದಾರರನ್ನು ಸಮಯೋಚಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಇದನ್ನು ಓದಿ : ಮುಂಡಗೋಡಿಗೆ ಟಿಬೇಟಿಯನ್ ಧರ್ಮಗುರು ದಲಾಯಿಲಾಮ. ಹೆಚ್ಚಿನ ಪೊಲೀಸ್ ಬಂದೋಬಸ್ತ್.
ಹಬ್ಬುವಾಡ ರಸ್ತೆ ಅವ್ಯವಸ್ಥೆ. ಡಿಸೆಂಬರ್ 16 ಕ್ಕೆ ಕುಡಿಕೆಯಲ್ಲಿ ಭಿಕ್ಷೆ ಬೇಡುವ ವಿನೂತನ ಪ್ರತಿಭಟನೆ.
