ದಾಂಡೇಲಿ(DANDELI) :  ಸಂಡೇ ಮಾರ್ಕೇಟ್ ಲಿಂಕ್ ರಸ್ತೆಯಲ್ಲಿರುವ (LINK ROAD) ಅಂಗಡಿಗಳ ಸರಣಿ ಕಳ್ಳತನ(SERIAL THEFT) ಮಾಡಿದ ಇಬ್ಬರು ಅಂತರಜಿಲ್ಲಾ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಹಸನಸಾಬ ಹಸನ ತಂದೆ ಕಾಸಿಂಸಾಬ ಬೇಗ (45) ಮತ್ತು ಆಶೀಪ್ ತಂದೆ ಕಾಸಿಂಸಾಬ ಬೇಗ (27,  ಬಂಧಿತರಾಗಿದ್ದಾರೆ.

ಬಂಧಿತರಿಂದ ಒಟ್ಟು 1,70,000/-ನಗದು ಹಣ ಹಾಗೂ 36.83 ಗ್ರಾಂ ಬಂಗಾರ ಆಭರಣಗಳು, 30.18 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಾಂಡೇಲಿ ನಗರ ಪೊಲೀಸ ಠಾಣೆಯ(DANDELI POLICE STATION) ಸಂಡೇ ಮಾರ್ಕೇಟನ ಅಂಕ್ ರಸ್ತೆಯಲ್ಲಿ ಸೆಪ್ಟೆಂಬರ್ 18 ರಂದು ರಾತ್ರಿ  ಸರಣಿ ಅಂಗಡಿ ಕಳ್ಳತನ ನಡೆದಿತ್ತು. ಈ ಬಗ್ಗೆ  ಪ್ರೀಯಾ ಇಂದ್ರಜೀತ ಕಾಳೆ ಎಂಬುವವರು ದಾಂಡೇಲಿ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಗಳ ಪತ್ತೆಗಾಗಿ ಎಸ್ಪಿ ನಾರಾಯಣ ಎಂ, ಆಡಿಷನಲ್ ಎಸ್ಪಿ  ಸಿ.ಟಿ ಜಯಕುಮಾರ್ ಮತ್ತು  ಜಗದೀಶ ನಾಯ್ಕ  ಹಾಗೂ ದಾಂಡೇಲಿ ಉಪ-ವಿಭಾಗದ ಡಿವೈಎಸ್‌ಪಿ  ಶಿವಾನಂದ ಮದರಖಂಡಿ ರವರ ಮಾರ್ಗದರ್ಶನದಲ್ಲಿ, ದಾಂಡೇಲಿ ಸಿ.ಪಿ.ಐ  ಭೀಮಣ್ಣ ಎಂ ಸೂರಿ ನೇತೃತ್ವದಲ್ಲಿ ಪಿ ಎಸ್ ಐ ಯಲ್ಲಪ್ಪ ಎಸ್, ಐ.ಆರ್ ಗಡ್ಡಕರ ಮತ್ತು ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಪ್ಪ ಬೆಳ್ಳಿವರಿ, ಇಮ್ರಾನ ಎಂ.ಕೆ. ಜಯನಗೌಡ ಪಾಟೀಲ್, ಸುನೀಲ ಲುಗಾಡೆ, ಚಿನ್ಮಯಾನಂದ ಎಂ ಪತ್ತಾರ. ಮಂಜುನಾಥ ಶೆಟ್ಟಿ, ಮಂಗಲದಾಸ ನಾಯ್ಕ. ಮಾಹಾಂತೇಶ ಜಾಮಗೌಡ, ದಶರಥ ಲಕ್ಕಾಪೂರ, ರೂಪಾ ಹೆಬ್ಬಳ್ಳಿ, ಕು. ಚಂದ್ರಿಕಾ ನಾಯ್ಕ, ಇನ್ನಿತರೆ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಶ್ರೀ ರಾಘು ನಾಯ್ಕ  ಹಾಗೂ ಸಿ.ಡಿ.ಆರ್ ವಿಭಾಗದ ಉದಯ ಗುನಗಾ ಹಾಗೂ ರಮೇಶ ನಾಯ್ಕ ರವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ಇದನ್ನು ಓದಿ : ಶಿರೂರಿನಲ್ಲಿ ಸಿಕ್ಕಿತು ಮತ್ತೊಬ್ಬರ ಮೃತದೇಹ

ಗೋವಾದಲ್ಲಿ ಬಾಂಗ್ಲಾ ನುಸುಳುಕೋರರಿರುವ ಸಾಧ್ಯತೆ

ದನಿಯಿಲ್ಲದವನಿಗೆ ದನಿಯಾಗಿ :ಜಿಲ್ಲಾಧಿಕಾರಿ