ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗುತ್ತಿರುವ ಯುದ್ಧ(War) ಭೀಕರತೆಯ ಹಿನ್ನೆಲೆ ತೈಲ ಪೂರೈಕೆ(Puel Supply) ವ್ಯತ್ಯಯವಾಗಬಹುದು ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹರಿದಾಡಿದ ಪರಿಣಾಮ ಭಟ್ಕಳದಲ್ಲಿ ವಾಹನ ಸವಾರರು ಪೆಟ್ರೋಲ್(Petrol) ಹಾಗೂ ಡೀಸೆಲ್(Diesel) ಖರೀದಿಗೆ ಮುಗಿಬಿದ್ದ ಘಟನೆ ಮಂಗಳವಾರ ಕಂಡುಬಂದಿತು.

ಗಲ್ಫ್ ರಾಷ್ಟ್ರಗಳಿಂದ(Gulf Country) ತೈಲ ಪೂರೈಕೆ ಅಭಾವವಾಗುವ ಸಾಧ್ಯತೆ ಇದೆ ಎಂಬ ಅಪ್ರಮಾಣಿತ ಸುದ್ದಿಗಳು ಹರಿದಾಡುತ್ತಿದ್ದಂತೆಯೇ ವಾಹನ ಸವಾರರು ಆತಂಕಗೊಂಡು ಸ್ಥಳೀಯ ಪೆಟ್ರೋಲ್ ಬಂಕ್‌ಗಳತ್ತ(Petrol Bunk) ದೌಡಾಯಿಸಿದರು. ಪಟ್ಟಣದ ಹೆದ್ದಾರಿ ಅಂಚಿನ ಕಾಮಾಕ್ಷಿ ಪೆಟ್ರೋಲ್ ಬಂಕ್ ಬಳಿ ದೀರ್ಘ ಸಾಲಿನಲ್ಲಿ ವಾಹನಗಳು ನಿಂತಿರುವುದು ಕಂಡುಬಂದಿತು. ಕೆಲವರು ಹೆಚ್ಚುವರಿ ಕ್ಯಾನ್‌ಗಳಲ್ಲಿ ಸಹ ಇಂಧನ ಸಂಗ್ರಹಿಸಲು ಮುಂದಾಗಿದ್ದಾರೆ.

ಸ್ಥಳೀಯರು ಹೇಳುವಂತೆ, ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ಮತ್ತಷ್ಟು ಉಲ್ಬಣವಾದರೆ ಭಾರತಕ್ಕೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಭೀತಿ ಜನರಲ್ಲಿ ಮನೆ ಮಾಡಿದೆ. ಆದರೆ ತೈಲ ಕಂಪನಿಗಳಿಂದ(Puel Company) ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ ಎಂಬುದು ಗಮನಾರ್ಹವಾಗಿದೆ.

“ಇಂಧನದ ಕೊರತೆ(Puel Shortage) ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನಮಗೆ ಬಂದಿಲ್ಲ. ಜನರು ವದಂತಿಗಳಿಗೆ ಕಿವಿಗೊಡದೇ ಶಾಂತವಾಗಿ ವರ್ತಿಸಬೇಕು,” ಎಂದು ಪೆಟ್ರೋಲ್ ಬಂಕ್ ನಿರ್ವಾಹಕರು ಮನವಿ ಮಾಡಿದ್ದಾರೆ.

ಇದನ್ನು ಓದಿ : ಮಸೀದಿ ಸಮೀಪ ಬಾಂಬ್ ಸ್ಫೋಟ ಬೆದರಿಕೆ – ಭಟ್ಕಳದ ವ್ಯಕ್ತಿ ಬಂಧನ.

ಜಾಗ್ನಳ್ಳಿ ಸಮೀಪ ಕಾರಿಗೆ ಆಕಸ್ಮಿಕ ಬೆಂಕಿ. ಸುಟ್ಟು‌ ಭಸ್ಮ.