ಕುಂದಾಪುರ (KUNDAPUR): ತಾಲೂಕು ಕಚೇರಿ ಆವರಣದಲ್ಲಿ ಕೆಲ ವ್ಯಕ್ತಿಗಳು ಹೊಯ್ ಕೈ ಮಾಡಿಕೊಂಡ ಘಟನೆ ನಡೆದಿದೆ.
ಜಾಗದ ವಿಚಾರದಲ್ಲಿ ಶುರುವಾದ ಮಾತಿಗೆ ಮಾತು ಬೆಳೆದು ತಾರಕಕ್ಕೇರಿದೆ. ಬಳಿಕ ಹೊಡೆದಾಟದಲ್ಲಿ ಅಂತ್ಯವಾಗಿದೆ. ಇಬ್ಬರು ವ್ಯಕ್ತಿಗಳ ನಡುವೆ ಶುರುವಾದ ಜಾಗದ ತಕರಾರು ತಹಸೀಲ್ದಾರ್ ಕಚೇರಿ ಅವರಣದೊಳಗೆ ನಡೆದಿದೆ. ಕಚೇರಿಗೆ ಬಂದ ನಾಗರಿಕರು ಈ ಜಗಳ ಪ್ರದರ್ಶನದ ಹಾಗೆ ಕಂಡರು. ಕೆಲವರು ಈ ಗಲಾಟೆ ಕಂಡು ಬೈಯುತ್ತಿರುವುದು ಕಂಡು ಬಂತು.
ಜಗಳ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್(TAHASIDAR) ತಮ್ಮ ಸಿಬ್ಬಂದಿಗಳ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದರು. ಆಗ ಜಗಳಕ್ಕೆ ಮಾಡುವವರನ್ನು ಕಾಂಪೌಂಡ್ ನಿಂದ ಹೊರಹಾಕುವಂತೆ ತಹಶೀಲ್ದಾರ್ ಸೂಚಿಸಿದರು.
ಇದನ್ನು ಓದಿ : ತಿರುಪತಿ ಲಡ್ಡು ಪ್ರಸಾದ ತಿಂದಿದ್ದೀರಾ? ಈ ನ್ಯೂಸ್ ನೋಡಿ