ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉತ್ತರಪ್ರದೇಶ(Uttarapradesha) : ಶಾಲಾ ಕೊಠಡಿಯೊಳಗೆ ಮಲಗಿ ಶಿಕ್ಷಕಿಯೊಬ್ಬರು ದುರ್ನಡತೆ(Teacher Misbehaviour) ತೋರಿದ ಘಟನೆ ಉತ್ತರ ಪ್ರದೇಶದ(Uttarapradesha) ಚಿತ್ರಕೂಟದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ತನ್ನ ವೃತ್ತಿ ನಡತೆ ತೋರಿಸೋದು ಬಿಟ್ಟು ಈ ಶಿಕ್ಷಕಿ ನೆಲದ ಮೇಲೆ ಮಲಗಿ ವಿದ್ಯಾರ್ಥಿನಿ ಕಾಲಿನಿಂದ ಬೆನ್ನು ತುಳಿಸಿಕೊಂಡಿದ್ದಾರೆ. ಈ ಸರ್ಕಾರಿ ಶಾಲೆಯ(Government School) ಮುಖ್ಯೋಪಾದ್ಯಾಯಿನಿ ಮಧು ರೈ ಎಂಬಾಕೆಯೆ ಪಾಠ ಮಾಡೋದು ಬಿಟ್ಟು ಉಲ್ಟಾ ಮಲಗಿಕೊಂಡು ವಿದ್ಯಾರ್ಥಿನಿಗೆ ಬೆನ್ನು ಒತ್ತು ಎಂದಿದ್ದಾರೆ. ವಿದ್ಯಾರ್ಥಿನಿಯರು ಆಕೆಯ ಬೆನ್ನು ತುಳಿಯುತ್ತಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ(Social Media) ಈ ವಿಡಿಯೋ ವೈರಲ್ ಆಗಿದೆ. ಶಿಕ್ಷಕಿಯು ಡೀಪ್ ನೆಕ್ ಇರುವಂತಹ ಬಟ್ಟೆ ಹಾಕಿಕೊಂಡು ಮಲಗಿರುವುದು ಇರಿಸುಮುರಿಸು ಉಂಟುಮಾಡಿದೆ. ಶಾಲೆಯೊಳಗೆ ಪ್ರೊಫೆಷನಲ್ ಅಲ್ಲದಂತೆ ನಡೆದುಕೊಂಡಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಕಿಯ ದುರ್ನಡತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ(Education Department), ಕೂಡಲೇ ತನಿಖೆಗೆ ಆದೇಶಿಸಿದೆ. ಅಲ್ಲದೇ ಶಿಕ್ಷಣಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲು ಮುಂದಾಗಿದ್ದಾಗಿ ವರದಿಯಾಗಿದೆ.
ಇದನ್ನು ಓದಿ : ಸೈಬರ್ ವಂಚಕರಿಂದ ಲಕ್ಷಾಂತರ ರೂ ಹಣ ಕಳೆದುಕೊಂಡ ಕಾರವಾರ ಮಹಿಳೆ.
ಔಷಧಿ ಕುಡಿಯಲು ಹಿಂಜರಿದ ಬಾಲಕ. ಕ್ಷಣಾರ್ಧದಲ್ಲಿ ನಾಪತ್ತೆ. ನಾಲ್ಕು ತಾಸಿನ ಬಳಿಕ ಪತ್ತೆ.
