ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಇನ್ಮುಂದೆ ಮದುವೆ  ಸಮಾರಂಭಗಳಲ್ಲಿ(Marriage Programme) ಮದುಮಗನ ಮನೆಗೆ ತೆರಳುವ ದಿಬ್ಬಣದ  (ಬಾರಾತ್)  ಫೋಟೊ ಹಾಗೂ ವಿಡಿಯೊ(Photo and Video) ಚಿತ್ರೀಕರಣವನ್ನು ಮಾಡದಿರಲು  ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಶನ್(Karwar Photographer Association) ನಿರ್ಧರಿಸಿದೆ.

ಶನಿವಾರ ಕಾರವಾರದ ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ  ಈ ವಿಷಯವನ್ನ  ಅಸೋಸಿಯೇಶನ್ ಸದಸ್ಯರು ತಿಳಿಸಿದ್ದಾರೆ. ಇತ್ತೀಚಿಗೆ  ಮದುವೆ ದಿಬ್ಬಣ ಕಾರ್ಯಕ್ರಮಗಳು ತಡರಾತ್ರಿವರೆಗೂ ಮುಂದುವರಿಯುವುದರಿಂದ ತೊಂದರೆಯಾಗುತ್ತಿದೆ. ಡಿಜೆ ಕುಣಿತಗಳಿಂದ ಕ್ಯಾಮೆರಾಗೂ,  ಫೋಟೋಗ್ರಾಫರ್ ಗಳು(Photographers) ಕಿರಿಕಿರಿಯಾಗುತ್ತಿದೆ. ಸಮಯದ ಮಿತಿ ಇಲ್ಲದೆ ಕೆಲಸ ಮಾಡಬೇಕಾದ ಪರಿಸ್ಥಿತಿಗೆ ಒಳಗಾಗಬೇಕಿದೆ. ತಡರಾತ್ರಿ ಕೆಲ ಕಡೆ ಫೋಟೋಗ್ರಾಫರ್ಗಳು ಹಾಗೂ ವಿಡಿಯೊಗ್ರಾಫರ್ಗಳೊಂದಿಗೆ(Videographers) ಅನುಚಿತ ವರ್ತನೆ ನಡೆಯುತ್ತಿದೆ. ಅಲ್ಲದೇ ಕ್ಯಾಮೆರಾಗಳನ್ನು ಕಸಿದು ಹಾನಿ ಮಾಡಿದ  ಘಟನೆಗಳು ನಡೆದಿದೆ ಎಂದು ಅಸೋಸಿಯೇಶನ್ ಸದಸ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹೀಗಾಗಿ  ಫೋಟೋಗ್ರಾಫರ್ಸ್(Photographers) ಮತ್ತು ಫೋಟೊ ಉಪಕರಣಗಳ(Photo Instruments) ಸುರಕ್ಷತೆಯ ದೃಷ್ಟಿಯಿಂದ ಇನ್ನು ಮುಂದೆ ಮದುವೆ ಹಾಲ್ನಲ್ಲಿ(Marriage Hall) ಮಾತ್ರ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ನಡೆಸಲಾಗುತ್ತದೆ. ಆದರೆ ಮದುಮಮಗನ ಮನೆಗೆ ಸಾಗುವ ದಿಬ್ಬಣ (ಬಾರಾತ್) ಕಾರ್ಯಕ್ರಮಗಳ ಚಿತ್ರೀಕರಣ ಮಾಡದಿರಲು ಅಸೋಸಿಯೇಶನ್ ತೀರ್ಮಾನ ತೆಗೆದುಕೊಂಡಿದೆ.

ಕಳೆದ ಕೆಲ ದಿನಗಳಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ.  ಫೋಟೊಗ್ರಾಫಿ ಉಪಕರಣಗಳು, ಸಾಮಗ್ರಿಗಳು ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ಸೈಜ್ ಫೋಟೊ(Passport Size Photo) ಸೇರಿದಂತೆ ವಿವಿಧ ಫೋಟೋಗ್ರಫಿ ಸೇವೆಗಳ ದರವನ್ನು ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಸಂತಾನ್ ಫರ್ನಾಂಡೀಸ್, ಸೂರಜ್ ಜೋಗಳಕರ್, ಬಾಲಚಂದ್ರ, ಶೈಲೇಶ, ಜಯಪ್ರಕಾಶ, ಅನಂತ ಪೈ, ಅನಿಲ ನಾಯ್ಕ, ರವಿ ನಾಯ್ಕ, ರವಿ ಕಾಂಬ್ಳೆ, ಮನೋಜ ನಾಯ್ಕ ಪ್ರಮೋದ ನಾಯ್ಕ ಸುರೇಶ ಶೇಣ್ವಿ ಸೇರಿದಂತೆ ಹಲವರು ಇದ್ದರು.

ಇದನ್ನು ಓದಿ : ಭಟ್ಕಳದಲ್ಲಿ ಮತಾಂಧ ಶಕ್ತಿಗಳ ವಿರುದ್ದ ಹಿಂದು ಕಾರ್ಯಕರ್ತರ ಆಕ್ರೋಶ. ಮುರಿನಕಟ್ಟೆ ಮರು ನಿರ್ಮಾಣಕ್ಕೆ ಆಗ್ರಹ.